ಬಳ್ಳಾರಿ: ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಬುಧವಾರ ಮಧ್ಯೆರಾತ್ರಿಯೇ ಎಕ್ಕದ ಗಿಡಕ್ಕೆ ಅರಿಸಿಣ ಬೇರು ಕಟ್ಟುವ ಮೂಲಕ ಇಲ್ಲಿನ ಜನರು ಮೌಢ್ಯಾಚಾರಣೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ನಾನಾ ತಾಲೂಕಿನ ಜನ ಜ್ಯೋತಿಷಿಗಳು ಹಾಗೂ ಪಂಚಾಂಗದ ಮೊರೆ ಹೋಗಿದ್ದಾರೆ. ಇನ್ನು ಶಾಲಾ- ಕಾಲೇಜುಗಳಿಗೆ ಅಘೋಷಿತ ರಜೆಯನ್ನು ಘೋಷಿಸುವ ಮೂಲಕ ಸೂರ್ಯಗ್ರಹಣದ ಭಯವನ್ನು ಎದುರಿಸಿದ್ದಾರೆ.
ನೆರೆಯ ಆಂಧ್ರಪ್ರದೇಶ ಮೂಲದ ಜ್ಯೋತಿಷವೋರ್ವರ ಸೂಚನೆ ಮೇರೆಗೆ ಬಳ್ಳಾರಿಯ ನಾನಾ ಕಡೆಗಳಲ್ಲಿ ಬೆಳೆದು ನಿಂತಿರೊ ಎಕ್ಕದ ಗಿಡಗಳಿಗೆ ಅರಿಸಿಣಕೊಂಬು ಕಟ್ಟುವ ಮೂಲಕ ವಿಶೇಷ ಪೂಜೆ ಹಾಗೂ ಪ್ರದಕ್ಷಿಣೆ ಮಾಡಿ ಮತ್ತಷ್ಟು ಮೌಢ್ಯಾಚರಣೆಯಲ್ಲಿ ಮಿಂದೆದ್ದಿದ್ದಾರೆ.
ಈ ಕಂಕಣ ಸೂರ್ಯಗ್ರಹಣದಿಂದ ಯಾರೊಬ್ಬರಿಗೂ ತೊಂದರೆಯಾಗೋದಿಲ್ಲ. ಅದೊಂದು ಸ್ವಾಭಾವಿಕ ಪ್ರಕ್ರಿಯೆ ಅಷ್ಟೇ. ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಣೆ ಮಾಡೋದರಿಂದ ತೊಂದರೆಯಾಗುತ್ತೆ. ಕಣ್ಣಿಗೆ ಕನ್ನಡಕ ಧರಿಸಿಕೊಂಡು ವೈಜ್ಞಾನಿಕವಾಗಿ ನೋಡಬಹುದೆಂದು ವಿಜ್ಞಾನಿಗಳು ಬೊಬ್ಬೆ ಹೊಡೆದುಕೊಂಡರೂ ಕೂಡ ಜಿಲ್ಲೆಯ ಜನರು ಮಾತ್ರ ಅಂಧಾನುಕರಣೆಯಲ್ಲಿ ತೊಡಗಿರುವುದು ವಿಪರ್ಯಾಸ.
ಕರ್ಕಿ ಪ್ರೋಕ್ಷಣೆ: ಮನೆಯೊಳಗಿನ ಆಹಾರ ಪದಾರ್ಥ, ಸಂಗ್ರಹಿಸಿದ ನೀರಿನ ಟ್ಯಾಂಕ್ ಹಾಗೂ ಫ್ರೀಜರ್ಗಳಿಗೆ ಕರ್ಕಿಯನ್ನು ಪ್ರೋಕ್ಷಣೆ ಮಾಡಲಾಯಿತು. ಎಲ್ಲ ಮನೆಗಳಲ್ಲೂ ಪೂಜೆ- ಪುನಸ್ಕಾರಾದಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.