ಬಳ್ಳಾರಿ: ನಗರದ ಕೌಲ ಬಜಾರ್ ಪ್ರದೇಶದ ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆ ಹಾಗೂ ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ನೇತೃತ್ವದಲ್ಲಿ ಹೋಮಿಯೋಪತಿ ಔಷಧಿಗಳನ್ನು ವಿತರಿಸಲಾಯಿತು.
ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ನೀಡಲಾದ ಹೋಮಿಯೋಪತಿ ಔಷಧಿಗಳ ಪಾತ್ರದ ಬಗ್ಗೆ ಹರಗಿನದೋಣಿಯ ಆಯುಷ್ ವೈದ್ಯಾಧಿಕಾರಿ ಡಾ.ಶಶಿಧರ್ ರಾಮದುರ್ಗ ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, ಕಂದಾಯ ಇಲಾಖೆ, ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಿದ್ದೇವೆ. ಇಂದು ಕೌಲ ಬಜಾರ್ ಪ್ರದೇಶದಲ್ಲಿ ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ನೇತೃತ್ವದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಾತ್ರೆ ತೆಗೆದುಕೊಳ್ಳುವುದು ಹೇಗೆ : ನಿರಂತರವಾಗಿ ಮೂರು ದಿನ ಬೆಳಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಒಂದು ಮಾತ್ರೆ ತೆಗೆದುಕೊಳ್ಳಬೇಕು. ನಂತರ ವಾರಕ್ಕೆ ಒಂದು ಮಾತ್ರೆ ಬೆಳಿಗ್ಗೆ ಅಥವಾ ರಾತ್ರಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಮಾತು ಮುಂದುವರೆಸಿ, ಐದು ವರ್ಷದ ಮೇಲ್ಪಟ್ಟವರು ಮಾತ್ರೆ ತೆಗೆದುಕೊಳ್ಳಬೇಕು ಎಂದ ಅವರು, ಜಿಲ್ಲಾ ಆಯುಷ್ ಇಲಾಖೆಯಲ್ಲಿ ಉಚಿತವಾಗಿ ಮಾತ್ರೆ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಮಾತ್ರೆ ಪಡೆಯಲು ಆಧಾರ್ ಕಾರ್ಡ್ ತರಬೇಕು. ತಮ್ಮ ಕುಟುಂಬದಲ್ಲಿ ಎಷ್ಟು ಸದಸ್ಯರು ಇದ್ದಾರೆ ಅಷ್ಟು ಮಾತ್ರೆ ಪಡೆಯಿರಿ ಎಂದರು.