ಬಳ್ಳಾರಿ: ಜಿಲ್ಲೆಯ ಕುಡುತಿನಿ ತಾಲೂಕಿನಲ್ಲಿ ಕೊರೊನಾ ವೈರಸ್ ಮತ್ತು ಡೆಂಘಿ ಬಗ್ಗೆ ವಿವಿಧ ಹಗಲುವೇಷಧಾರಿಗಳು ಜಾಗೃತಿ ಮೂಡಿಸಿದರು.
ಮಾಸ್ಕ್ ಧರಿಸದೇ ಬೀದಿಗಳಿದ ಪಾದಾಚಾರಿಗಳು, ವಾಹನ ಸವಾರರಿಗೆ ಯಮಧರ್ಮರಾಯ ಪಾಶ ಹಾಕಿ ಎಳೆದರೆ, ಹನುಮಂತ ಗದೆಯ ಮೂಲಕ, ದುರುಗ ಮುರುಗಿ ಚಾಟಿ ತೋರುವ ಮೂಲಕ ಎಚ್ಚರಿಸಿದರು.
ಕಲಾವಿದರಾದ ಗಂಗಾಧರಪ್ಪ ಯಡವಲಿ, ದೊಡ್ಡಲಾಲೆಪ್ಪ, ಆಶ್ವ ಸುರೇಶ್, ವಿ.ರಾಘವೇಂದ್ರ, ತಿಪ್ಪೇಸ್ವಾಮಿ, ವೈ.ಲಿಂಗಪ್ಪ, ಸಣ್ಣಗಾದಿಲಿಂಗಪ್ಪ, ದುರುಣ ಮುರುಗಿ ಕಲಾವಿದರಾದ ರಾವುಲ್ ನಾಗಪ್ಪ, ಮುನಿಯಮ್ಮ, ರಾಜಮ್ಮ, ದೊಡ್ಡರಾಜಯ್ಯ, ಯಲ್ಲಪ್ಪ, ವೆಂಕಟೇಶ, ತಾಷಾರಾಂಡೋಲ್ ತಂಡದ ಅಂಬಣ್ಣ, ಸಣ್ಣ ತಮ್ಮಣ್ಣ, ತಾಯಪ್ಪ, ವಿಜಯ್, ಬಾಲಪ್ಪ, ಕಲಾವಿದರು ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಿದರು.
ಈ ಸಮಯದಲ್ಲಿ ಕುಡುತಿನಿ ಪೊಲೀಸ್ ಠಾಣೆಯ ಪಿ.ಎಸ್.ಐ ರಫೀ, ತಾಲೂಕು ಪಂಚಾಯತ್ ಕಚೇರಿಯ ಅಧಿಕಾರಗಳು, ಸಿಬ್ಬಂದಿಗಳು ಇದ್ದರು.