ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೈವಲ್ಯಾಪುರ ಗ್ರಾಮದ ಐತಿಹಾಸಿಕ ಪ್ರಸಿದ್ಧ ಅನಂತ ಪದ್ಮನಾಭ ದೇಗುಲಕ್ಕೆ ನಿಧಿಗಳ್ಳರು ಕನ್ನ ಹಾಕಿದ ಪ್ರಸಂಗ ನಡೆದಿದೆ.
ಈ ದೇಗುಲದ ಪಕ್ಕದಲ್ಲೇ ನಿಧಿ ಆಸೆಗಾಗಿ ನಿಧಿಗಳ್ಳರು ದೊಡ್ಡದಾದ ಗುಂಡಿ ಅಗೆದಿದ್ದಾರೆ. ಯಾವುದೇ ನಿಧಿ ದೊರಕದ ಕಾರಣ, ಬರಿಗೈಯಲಿ ಅಲ್ಲಿಂದ ನಿಧಿಗಳ್ಳರು ಕಾಲ್ಕಿತ್ತಿದ್ದಾರೆ. ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಹಾಗೂ ಅನೆಗುಂದಿಯಲ್ಲಿ ನಿಧಿಗಳ್ಳರ ಉಪಟಳ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಘಟನಾ ಸ್ಥಳಕ್ಕೆ ಕೂಡ್ಲಿಗಿ ಠಾಣೆಯ ಪೊಲೀಸರು, ಪುರಾತತ್ವ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ.