ಬಳ್ಳಾರಿ: ಸಾರ್ವತ್ರಿಕ ಚುನಾವಣೆಗೆ ಇನ್ನಾರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ನಾರಾ ಭರತ್ ರೆಡ್ಡಿ ಎಂಬವರು ತಮ್ಮ ಬೆಂಬಲಿಗರ ಜೊತೆ ಮನೆ ಮನೆಗೆ ತೆರಳಿ ಕುಕ್ಕರ್ ಹಂಚುವ ಕಾರ್ಯ ಆರಂಭಿಸಿದ್ದಾರೆ.
ಟಚ್ ಫಾರ್ ಲೈಪ್ ಫೌಂಡೇಷನ್‌ನ ಲೋಗೋ ಹಾಗೂ ತಮ್ಮ ಭಾವಚಿತ್ರವಿರುವ ಕುಕ್ಕರ್ ಅನ್ನು ತಾಳೂರು ರಸ್ತೆಯ ಮಹಾನಂದಿಕೊಟ್ಟಂ ಪ್ರದೇಶದಲ್ಲಿ ಅವರು ಹಂಚುತ್ತಿದ್ದರು. ಮುಂದಿನ ದಿನಗಳಲ್ಲಿ ನಗರದ ಎಲ್ಲಾ 26 ವಾರ್ಡ್‌ಗಳಲ್ಲಿ ಹಂಚಿಕೆ ಗುರಿಯನ್ನು ಅವರು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಭರತ್ ರೆಡ್ಡಿ ವಿತರಿಸುತ್ತಿರುವ ಕುಕ್ಕರ್ ಬಾಕ್ಸ್ ಮೇಲೆ ಪಕ್ಷದ ಚಿಹ್ನೆ ಇಲ್ಲ.
ಇದನ್ನೂ ಓದಿ: ನಯನಾ ಮೊಟಮ್ಮನಿಗೆ ಟಿಕೆಟ್ ನೀಡುವುದಕ್ಕೆ ವಿರೋಧ: ಕಾಂಗ್ರೆಸ್ನಲ್ಲಿ ಭುಗಿಲೆದ್ದ ಆಕ್ರೋಶ