ETV Bharat / state

ಹಂಪಿ ಉತ್ಸವ ಸಾಂಕೇತಿಕ ಆಚರಣೆಗೆ ಕಲಾವಿದರ ವೇದಿಕೆ ವಿರೋಧ - ಸರಳ ಹಂಪಿ ಉತ್ಸವ ಆಚರಣೆ

ಕೆಲವರ ಜೀವನವಂತೂ ದುಸ್ತರವಾಗಿದೆ. ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ ಜಿಲ್ಲೆಯ ಕಲಾವಿದರಿಗೆ ಈ ಬಾರಿಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲೇಬೇಕೆಂದು ಕೆ.ಜಗದೀಶ್ ಕೋರಿದ್ದಾರೆ..

hampi
hampi
author img

By

Published : Nov 7, 2020, 7:47 AM IST

ಬಳ್ಳಾರಿ : ಕೋವಿಡ್ ಸೋಂಕು ವ್ಯಾಪಕ ಹರಡುವಿಕೆ ಕಾರಣ ನೀಡಿ ಗಣಿಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವ ಆಚರಣೆಯನ್ನ ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಿರುವುದಕ್ಕೆ ಜಿಲ್ಲಾ ಕಲಾವಿದರ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಈ ಸಂಬಂಧ ಜಿಲ್ಲಾ ಕಲಾವಿದರ ವೇದಿಕೆಯ ಸಂಚಾಲಕ ಕೆ.ಜಗದೀಶ್ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮನವಿ ಸಲ್ಲಿಸಿದೆ. ಮೈಸೂರು ದಸರಾ ಉತ್ಸವವನ್ನ‌ ಅತ್ಯಂತ ವಿಜೃಂಭಣೆಯಿಂದ ಮಾಡುವ ರಾಜ್ಯ ಸರ್ಕಾರ, ಅದರ ಪ್ರತೀಕವಾಗಿರುವ ಈ ಹಂಪಿ ಉತ್ಸವ ಆಚರಣೆಗೆ ಏತಕ್ಕೆ ಮೀನಾಮೇಷ ಎಣಿಸುತ್ತಿದೆ. ಅಲ್ಲದೇ, ಕಳೆದ ಬಾರಿಯೂ ಕೂಡ ಬರಗಾಲದ ನೆಪವೊಡ್ಡಿ ಕೇವಲ ಎರಡು ದಿನದ ಮಟ್ಟಿಗೆ ಈ ಉತ್ಸವ ಆಚರಣೆಯನ್ನ‌ ಸೀಮಿತಗೊಳಿಸಿತ್ತು ಎಂದಿದ್ದಾರೆ.

ಈ ಬಾರಿ ಉತ್ಸವವನ್ನು ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸ್ಪದ ನೀಡದೇ ಜಿಲ್ಲೆಯ ಬಡ ಕಲಾವಿದರ ಜೀವನಕ್ಕೆ ಕುತ್ತು ತರಲಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲದೇ ಬಡ ಕಲಾವಿದರು ಪರಿತಪಿಸುತ್ತಿದ್ದಾರೆ.‌

ಕೆಲವರ ಜೀವನವಂತೂ ದುಸ್ತರವಾಗಿದೆ. ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ ಜಿಲ್ಲೆಯ ಕಲಾವಿದರಿಗೆ ಈ ಬಾರಿಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲೇಬೇಕೆಂದು ಕೆ.ಜಗದೀಶ್ ಕೋರಿದ್ದಾರೆ.

ಅಲ್ಲದೇ ಈ ಉತ್ಸವವನ್ನ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು.‌ ಸರಳವಾಗಿಯಾದ್ರೂ ಕೂಡ ಮೂರು ದಿನಗಳ ಕಾಲ ಈ ಉತ್ಸವವನ್ನ ಆಚರಣೆ ಮಾಡಲೇಬೇಕೆಂದು ಕಲಾವಿದರ ವೇದಿಕೆ ಪಟ್ಟು ಹಿಡಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.