ಬಳ್ಳಾರಿ: ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ.
ಬಿಜೆಪಿಯಿಂದ 2004 ರಲ್ಲಿ ಶಾಸಕರಾಗಿದ್ದ ಹೆಚ್.ಅನಿಲ್ 2008ರಲ್ಲಿ ಸೋತಿದ್ರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದ ಅವರು 2008ರಿಂದ 2013ರವರೆಗೂ ರಾಜ್ಯಸಭಾ ಸದಸ್ಯರಾಗಿದ್ರು. ಆದರೆ, ಕಾಂಗ್ರೆಸ್ ನಡೆಸಿದ ಪಾದಯಾತ್ರೆಯ ಅಲೆಯಿಂದಲೇ ಮತ್ತೆ 2013ರಲ್ಲಿ ಬಳ್ಳಾರಿ ಕ್ಷೇತ್ರದ ಶಾಸಕರಾಗಿದ್ದರು. 2018ರಲ್ಲಿ ಸೋಲು ಕಂಡಿದ್ದರು. ಇದೀಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಬಿಜೆಪಿ ಗೂಡಿಗೆ ಸೇರಿಕೊಳ್ಳುತ್ತಿದ್ದಾರೆ ಎಂಬ ವದಂತಿ ಜಿಲ್ಲೆಯಲ್ಲಿ ಹಬ್ಬಿದೆ.
![anil](https://etvbharatimages.akamaized.net/etvbharat/prod-images/4568681_anil.jpg)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ಬಿ.ಶ್ರೀರಾಮುಲು ಅವರ ಸಮ್ಮುಖದಲ್ಲೇ ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯೂ ದಟ್ಟವಾಗಿದೆ. ಬ್ರೂಸ್‌ಪೇಟೆ ಬ್ಲ್ಯಾಕ್ ಕಾಂಗ್ರೆಸ್ ಸಮಿತಿಯ ವಾಟ್ಸಾಪ್ ಗೂಪಿನಲ್ಲಿ ಸ್ವತಃ ಅನಿಲ್ ಲಾಡ್ ಅವರೇ ಬಿಜೆಪಿ ಸೇರ್ಪಡೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅನಿಲ್ ಲಾಡ್ ಎಲ್ಲೂ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಈ ಸುದ್ದಿಯನ್ನು ಹಬ್ಬಿಸಿರೋದು ಅಚ್ಚರಿ ಮೂಡಿಸಿದೆ.