ETV Bharat / state

ಅನಾಥೆ ಮೇಲೆ ನಿರಂತರ ಅತ್ಯಾಚಾರ: ಪೊಲೀಸ್​​ ಅಧಿಕಾರಿಯ ಸಹೋದರನ ಮಗನಿಂದ ಕೃತ್ಯ ಆರೋಪ

ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜನ ಮನೆಯಲ್ಲಿ ವಾಸವಿದ್ದ ಯುವತಿವೋರ್ವಳ ಮೇಲೆ ಪೊಲೀಸ್​ ಅಧಿಕಾರಿ ಸಹೋದರನೋರ್ವನ ಮಗ ನಿರಂತರ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

Rajanayka
ರಾಜನಾಯ್ಕ
author img

By

Published : Sep 3, 2020, 3:18 PM IST

ಬಳ್ಳಾರಿ: ಅನಾಥ ಯುವತಿಯ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಜಿಲ್ಲೆಯ ಪೊಲೀಸ್ ಅಧಿಕಾರಿವೋರ್ವನ ಸಹೋದರನ ಮಗನ ಮೇಲೆ ಇರುವುದು ಇದೀಗ ಬೆಳಕಿಗೆ ಬಂದಿದೆ.

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿಯಾಗಿರುವ ಯುವತಿ ನಿರಂತರ ಲೈಂಗಿಕ ದೌರ್ಜನ್ಯಕ್ಕೊಳದವಳು. ಅದೇ ಗ್ರಾಮದ ಹಿರಿಯ ಪೊಲೀಸ್ ಅಧಿಕಾರಿಯ ಸಹೋದರನ ಮಗನಾಗಿರುವ ರಾಜನಾಯ್ಕ (25) ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಎಂದು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮ‌ೂಲತಃ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿ ತಾಂಡಾದ ನಿವಾಸಿಯಾಗಿರುವ ಯುವತಿಯ ತಂದೆ-ತಾಯಿ ಮೃತಪಟ್ಟಿದ್ದರು. ಹೀಗಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಈಕೆ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದಾಳೆ. ಕಳೆದೊಂದು ವರ್ಷದ ಹಿಂದೆ ಪರಿಚಯವಾದ ಇದೇ ಗ್ರಾಮದ ರಾಜನಾಯ್ಕ ಎಂಬ ಯುವಕ ಈ ಅನಾಥ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅವಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗ್ತಿದೆ. ಈ ಬಗ್ಗೆ ಬೇರೆಯವರ ಬಳಿ ಹೇಳದಂತೆ ರಾಜಾನಾಯ್ಕ ಒತ್ತಡ ಹೇರಿದ್ದರಿಂದ ಯುವತಿ ಈ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದಳು ಎಂದು ಆಕೆಯ ಸಂಬಂಧಿಕರು ಹೇಳಿದ್ದಾರೆ.

ಆರೋಪಿಯ ಡಿವೈಎಸ್​ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಅಧಿಕಾರ​​ ಬಳಸಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ. ‌

ಕಳೆದ 6 ತಿಂಗಳಿಂದ ನಿರಂತರವಾಗಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ರಾಜನಾಯ್ಕ ನನಗೆ ಬೇಕು. ಅವನೇ ನನ್ನನ್ನು ಮದುವೆಯಾಗಬೇಕು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ.‌ ಸದ್ಯ ರಾಜನಾಯ್ಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.