ಬಳ್ಳಾರಿ: ವೀರಶೈವ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು, ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಉದ್ಘಾಟಿಸಿದರು.
ಗೋನಾಳ ರಾಜಶೇಖರ ಗೌಡ ಅವರು ಮಾತನಾಡಿ ದುಡಿಯುವ ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗದೇ ಇರುವುದು ಹಲವು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಬದುಕನ್ನು ರೂಪಿಸಿಕೊಡುವ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಯೋಗಿಕ ಮತ್ತು ವ್ಯವಹಾರಿಕವಾಗಿ ಉಪಯುಕ್ತವಾಗುವ ಜ್ಞಾನ ಮತ್ತು ಕೌಶಲಗಳ ಬೆಳೆವಣಿಗೆಗೆ ಶಿಕ್ಷಣ ಸಂಸ್ಥೆಗಳು ಹೆಚ್ಚು ಮಹತ್ವ ಕೊಡಬೇಕೆಂದರು.