ETV Bharat / state

ಲಾಕ್‌ಡೌನ್‌ ನಿಯಮ ಉಲ್ಲಂಘನೆ:  2 ಲಕ್ಷ ರೂ. ದಂಡ ವಸೂಲಿ

author img

By

Published : May 9, 2020, 12:33 PM IST

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಮಿಂಚಿನ ಕಾರ್ಯಾ ಚರಣೆ ನಡೆಸಿದ ಬಳ್ಳಾರಿ ಮಹಾನಗರ ಪಾಲಿಕೆಯ ಹೆಲ್ತ್​ ಇನ್ಸ್​​​ಪೆಕ್ಟರ್​​​​​​​ಗಳು, 2 ಲಕ್ಷ ರೂ. ದಂಡ ವಸೂಲಿ ಮಾಡಿ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

2 Lakhs from Lockdown violators Fines
ಲಾಕ್‌ಡೌನ್‌ ನಿಯಮ ಉಲ್ಲಂಘನೆ...ಸಾರ್ವಜನಿಕರಿಂದ 2 ಲಕ್ಷ ರೂ. ದಂಡ ವಸೂಲಿ

ಬಳ್ಳಾರಿ: ಗಣಿನಾಡಲ್ಲಿ ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಆದರೆ, ಜನರು ಅನವಶ್ಯಕವಾಗಿ ಓಡಾಡುವುದನ್ನ ಮಾತ್ರ ಕಡಿಮೆ ಮಾಡಿಲ್ಲ. ಹೀಗಾಗಿ ಮಾಸ್ಕ್ ಧರಿಸಿದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವವರಿಗೆ ಬಳ್ಳಾರಿ ಮಹಾನಗರ ಪಾಲಿಕೆಯ ಹೆಲ್ತ್​ ಇನ್ಸ್​​ಪೆಕ್ಟರ್​​​ಗಳು 100 ರೂ. ದಂಡ ವಿಧಿಸುತ್ತಿದ್ದಾರೆ.

ಸಾರ್ವಜನಿಕರು ಬೆಳಗ್ಗೆ 7 ರಿಂದ ಸಂಜೆ 7 ರವೆಗೆ ಲಾಕ್​ಡೌನ್ ಸಡಿಲಿಕೆ ನಿಯಮಗಳನ್ನ ಅನುಸರಿಸಿ ರಸ್ತೆಗೆ ಇಳಿಯಬೇಕು ಎನ್ನುವ ಆದೇಶವನ್ನ ಜಿಲ್ಲಾಡಳಿತದಿಂದ ಹೊರಡಿಸಲಾಗಿದೆ.‌ ಆದರೂ ಸಾರ್ವಜನಿಕರು ನಿಯಮ ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದಾರೆ. ಹೀಗೆ ಅನಗತ್ಯವಾಗಿ ಓಡಾಡುವವರಿಂದ 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಜನರು ಸರ್ಕಾರದ ನಿಯಮ ಗಾಳಿಗೆ ತೂರಿ ಓಡಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.