ವಿಜಯನಗರ : ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಶುಕ್ರವಾರ ಸಿಡಿಲು ಬಡಿದು 17ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. 15ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತೆಲಿಗಿ ಗ್ರಾಮದ ಕೆರೆಯ ಮೇಲೆ ಕುರಿಗಳು ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಂದು ನಾಯಿ ಕೂಡ ಸಾವನ್ನಪ್ಪಿದೆ ಎನ್ನಲಾಗ್ತಿದೆ. ರೈತ ತಿಪ್ಪೇಶಪ್ಪ, ಮಂಜುನಾಥ, ತಳವಾರ ರೇವಣ್ಣಪ್ಪ ಅವರಿಗೆ ಸೇರಿದ ಕುರಿಗಳಾಗಿವೆ.
ಲಕ್ಷಾಂತರ ರೂ.ಮೌಲ್ಯದ ಕುರಿಗಳನ್ನು ಕಳೆದುಕೊಂಡ ಕುರಿಗಾಯಿ ಕುಟುಂಬ ಕಣ್ಣೀರಿಡುತ್ತಿದೆ. ಇನ್ನೂ ಕಂಚಿಕೇರಿ ಗ್ರಾಮದಲ್ಲೂ ಸಿಡಿಲಿಗೆ ಒಂದು ಆಕಳು ಬಲಿಯಾಗಿದೆ ಎಂದು ತಿಳಿದು ಬಂದಿದೆ.