ಹೊಸಪೇಟೆ: ನಗರದಲ್ಲಿ 144 ಸೆಕ್ಷನ್ ಜಾರಿಯಾದ ಹಿನ್ನೆಲೆ ಪಟ್ಟಣದ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.
ನಗರದ ಕೌಲ್ ಪೇಟೆ, ಮೇನ್ ಬಜಾರ್ ಸೇರಿದಂತೆ ನಗರದ ಹಲವೆಡೆ ಸಂಚರಿಸಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಅಂಗಡಿಗಳನ್ನು ಬಂದ್ ಮಾಡಿಸಿದರು. ಪೊಲೀಸರ ಕ್ರಮಕ್ಕೆ ಕೆಲ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾದರು.
ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ, ಮೇ 4ರವರೆಗೆ 144 ಸೆಕ್ಷನ್ ಜಾರಿಯಾಗಿದೆ. ಹಾಗಾಗಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಬಟ್ಟೆ, ಆಟೋ ಮೊಬೈಲ್ ಸೇರಿದಂತೆ ಇನ್ನಿತರ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ ಎಂದು ಮೈಕ್ ಮೂಲಕ ಪ್ರಚಾರ ಮಾಡಿದರು.