ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 1,106 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಇದೇ ಅವಧಿಯಲ್ಲಿ 8 ಸೋಂಕಿರು ಮೃತಪಟ್ಟಿದ್ದಾರೆ. ಈ ಎರಡೂ ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 49,434ಕ್ಕೆ ಏರಿಕೆಯಾಗಿದ್ದು, 700 ಜನ ಸಾವನ್ನಪ್ಪಿದ್ದಾರೆ. 41,363 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 316 ಡಿಸ್ಟಾರ್ಜ್ ಆಗಿದ್ದು, 7,371 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿಯಲ್ಲಿ 433, ಸಂಡೂರು- 70, ಸಿರುಗುಪ್ಪ- 73 , ಹೊಸಪೇಟೆ- 344, ಎಚ್.ಬಿ.ಹಳ್ಳಿ- 57, ಹರಪನಹಳ್ಳಿ- 57, ಹಡಗಲಿ- 40 ಮತ್ತು ಹೊರ ರಾಜ್ಯದಿಂದ ಬಂದ 1, ಹೊರ ಜಿಲ್ಲೆ 3 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.