ಬೆಳಗಾವಿ: ಸ್ಕೂಟಿಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗಡಿ ಪ್ರದೇಶ ಶಿನ್ನೋಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿ ಮಹಾರಾಷ್ಟ್ರದ ಮೂಲದ ಚಂದಗಡ ತಾಲೂಕಿನ ಶಿವಂಗೆ ಗ್ರಾಮದ ವೈಷ್ಣವಿ ವಿಶ್ವಾಸ ಪಾಟೀಲ್ (21) ಎಂದು ಗುರುತಿಸಲಾಗಿದೆ. ಮೃತ ಯುವತಿಯ ತಂದೆ ವಿಶ್ವಾಸ ತುಕಾರಾಮ್ ಪಾಟೀಲ್‍ಗೆ ಗಂಭೀರ ಗಾಯವಾಗಿದೆ.
ಶಿವಂಗೆಯಿಂದ ಬೆಳಗಾವಿಗೆ ಶಿನ್ನೋಳಿ ಬಳಿ ಅಪ್ಪ-ಮಗಳು ಬರುತ್ತಿದ್ದ ವೇಳೆ ಸ್ಕೂಟಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಯುವತಿ ಟ್ರಕ್ ಟಯರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಘಟನೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.