ETV Bharat / state

ಚಂದ್ರಯಾನ - 3 ಮಿಷನ್​ನಲ್ಲಿ ಬೆಳಗಾವಿ ಯುವ ವಿಜ್ಞಾನಿ - ಬೆಳಗಾವಿ ನ್ಯೂಸ್​

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೆಡ್ನೇಕರ್ ಎಂಬ ಯುವ ವಿಜ್ಞಾನಿ ಚಂದ್ರಯಾನ - 3 ಮಿಷನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

Belagavi scientist working on the Chandrayaan 3
ಚಂದ್ರಯಾನ-3ಗೆ ಸಾಥ್ ಕೊಟ್ಟ ಬೆಳಗಾವಿ ಯುವ ವಿಜ್ಞಾನಿ
author img

By

Published : Jul 14, 2023, 2:33 PM IST

ಚಂದ್ರಯಾನ-3 ಉಡಾವಣೆ : ಶುಭ ಹಾರೈಸಿದ ಸ್ವಾಮೀಜಿ

ಬೆಳಗಾವಿ: ಇಸ್ರೋದಿಂದ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಈ ಮಹತ್ಕಾರ್ಯದಲ್ಲಿ ಬೆಳಗಾವಿ ಜಿಲ್ಲೆ ಯುವಕನೊಬ್ಬ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಖಾನಾಪುರ ತಾಲೂಕಿನ ಅನಗಡಿ ಗ್ರಾಮದ 'ಪ್ರಕಾಶ ಪೆಡ್ನೇಕರ್' ಎಂಬ ಯುವ ವಿಜ್ಞಾನಿ ಚಂದ್ರಯಾನ- 3 ಮಿಷನ್​ನಲ್ಲಿ ಕೆಲಸ ಮಾಡುತ್ತಿರುವವರು. ಚಂದ್ರಯಾನ-2 ರಲ್ಲಿಯೂ ಇವರು ಕೆಲಸ ಮಾಡಿದ್ದರು.

ಶುಭ ಹಾರೈಸಿದ ಸ್ವಾಮೀಜಿ: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಚಂದ್ರಯಾನ - 3 ಉಡಾವಣೆ ಬಗ್ಗೆ ಮಾತನಾಡಿರುವ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ‌. ಅಲ್ಲಮಪ್ರಭು ಸ್ವಾಮೀಜಿ "21ನೇ ಶತಮಾನ ಭಾರತದ ಪಾಲಿಗೆ ವಿಶೇಷವಾದ ಶತಮಾನ. ವಿಶ್ವದಲ್ಲೇ ಭಾರತ ವಿಶೇಷ ಸ್ಥಾನ ಹೊಂದಿದೆ. ವಿಶ್ವ ಗುರುವಾಗುವತ್ತ ಹೆಜ್ಜೆ ಇಡುವ ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಷ್ಠಿತ ಇಸ್ರೋದಿಂದ ಕೈಗೊಂಡಿರುವ ಚಂದ್ರಯಾನ - 3 ಉಡಾವಣೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬೆಳಗಾವಿಯ ಡಾ.ಸ. ಜ ನಾಗಲೋಟಿ ಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ಡಾ. ರಾಜಶೇಖರ ಪಾಟೀಲ್ ಮಾತನಾಡಿ "ಇಡೀ ವಿಶ್ವದಲ್ಲೇ ಭಾರತದ ಕೀರ್ತಿಯನ್ನು ಅಜರಾಮರಗೊಳಿಸಿದ ಶ್ರೇಯಸ್ಸು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಸಲ್ಲುತ್ತದೆ. ಪ್ರಸ್ತುತ ಇಸ್ರೋ ಕೋಟ್ಯಂತರ ಭಾರತೀಯರ ಕನಸು ನನಸುಗೊಳಿಸಲು ಹೊರಟಿದೆ. ಚಂದ್ರಯಾನ-3 ಅನ್ನು ಎಲ್.ವಿ.ಎಂ-3 ರಾಕೆಟ್ ಮೂಲಕ ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಇದು ಅತ್ಯಂತ ಯಶಸ್ವಿಯಾಗಲಿ. ಆ ಮೂಲಕ ಭಾರತೀಯರಿಗೆ ಚಂದ್ರನ ಬಗ್ಗೆ ಅಪಾರ ಜ್ಞಾನ ಮತ್ತು ಮಾಹಿತಿ ದೊರೆಯಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ: India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ಬಹುನಿರೀಕ್ಷೆಯ ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಮಿಷನ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ 3ನೇ ಅತಿ ದೊಡ್ಡ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ 3 ಇಂದು ಮಧ್ಯಾಹ್ನ 2.35ಕ್ಕೆ ಆರಂಭಗೊಳ್ಳಲಿದೆ. 3 ಹಂತದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುಸೂತ್ರವಾಗಿ ಲ್ಯಾಂಡ್ ಆಗಲಿದೆ. ಚಂದ್ರಯಾನ 2ರಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು ಚಂದ್ರನ ಅಂಗಳದ ನಿಗದಿತ ಸ್ಥಳದಲ್ಲಿ ರೋವರ್‌ ಇಳಿಯುವಂತೆ ಮಾಡುವ ಸವಾಲು ಇಸ್ರೊ ವಿಜ್ಞಾನಿಗಳ ಮುಂದಿದೆ.

ಒಂದೊಮ್ಮೆ ಇದು ಸಾಧ್ಯವಾದರೆ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್‌ ಇಳಿಸಿದ 4ನೇ ರಾಷ್ಟ್ರ ಭಾರತವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಹಾಗೂ ಚೀನಾದ ಯೋಜನೆಗಳು ಯಶಸ್ವಿಯಾಗಿದ್ದವು. 2019ರಲ್ಲಿ ಭಾರತ ಮತ್ತು ಇಸ್ರೇಲ್ ಈ ಪ್ರಯತ್ನಕ್ಕೆ ಕೈ ಹಾಕಿದ್ದವು.

ಇದನ್ನೂ ಓದಿ: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.35 ಕ್ಕೆ ನಭಕ್ಕೆ ಚಿಮ್ಮಲಿದೆ ಉಪಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.