ಬೆಳಗಾವಿ: ಪ್ರೀತಿಸಿ ಅರ್ಧಕ್ಕೆ ಕೈಕೊಟ್ಟ ಯುವತಿಯ ವರ್ತನೆಗೆ ಬೇಸತ್ತ ಪ್ರಿಯಕರನೊಬ್ಬ ಆಕೆಯ ನಗ್ನ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಶಾಸ್ತ್ರಿ ನಗರದ ಯುವಕ ಹಾಗೂ ನ್ಯೂ ಗೂಡ್ಸ್ ಶೆಡ್ ರಸ್ತೆಯ ಸಮೀಪದ ಬಡಾವಣೆಯ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಸಲುಗೆ ಇದ್ದಾಗ ಯುವಕ ವಿಡಿಯೋ ಮಾಡಿಕೊಂಡಿದ್ದನು. ಕೆಲ ದಿನಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಇಬ್ಬರ ನಡುವಿನ ಲವ್ ಬ್ರೇಕಪ್ ಆಗಿತ್ತು.
ಪ್ರೀತಿಸಿ ಅರ್ಧಕ್ಕೆ ಕೈಕೊಟ್ಟ ಯುವತಿ ನಡೆಗೆ ಬೇಸತ್ತ ಯುವಕ ಇಬ್ಬರೂ ಸಲುಗೆಯಿಂದ ಇದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಕೃತ್ಯ ಎಸಗಿದ ಯುವಕನ ವಿರುದ್ಧ ಯುವತಿ ಸಿಇಎನ್ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.