ಬೆಳಗಾವಿ: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಅನ್ನಪೂರ್ಣೇಶ್ವರಿ ಫೌಂಡೇಶನ್ ಮಹಿಳಾ ಶಕ್ತಿ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಹಿಳೆಯರು ನಾವು ಯಾವುದರಲ್ಲೂ ಕಡಿಮೆ ಇಲ್ಲ ಅನ್ನುವ ಹಾಗೆ ತಮ್ಮದೇ ಆದ ಶೈಲಿಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ ಸಂಭ್ರಮಿಸಿದ್ದಾರೆ.
ವಿಶೇಷವಾಗಿ ಆಹಾರ ಮೇಳ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ಬಂದಿದ್ದರು. ಫಿಜ್ಜಾ, ಬರ್ಗರ್, ಜ್ಯೂಸ್, ಕೇಕ್, ಚಕ್ಕಲಿ, ಹೋಳಿಗೆ, ಹುಗ್ಗಿ, ಪುಲಾವ್, ಪೂರಿ ಹಾಗೂ ರೊಟ್ಟಿ, ಚಪಾತಿ, ಚಟ್ನಿ, ಹಪ್ಪಳ, ಸಂಡಿಗೆ, ಉಂಡೆಗಳು ಸೇರಿದಂತೆ ಸಾಕಷ್ಟು ವೆರೈಟಿ ಫುಡ್ಗಳನ್ನು ತಯಾರಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 200ಕ್ಕಿಂತ ಹೆಚ್ಚಿನ ಮಹಿಳೆಯರು ಪಾಲ್ಗೊಂಡಿದ್ದರು.
ನಿತ್ಯ ತನ್ನ ಕುಟುಂಬಕ್ಕಾಗಿ ತನ್ನ ಎಲ್ಲ ಕನಸುಗಳನ್ನ ಬದಿಗೊತ್ತಿ ಕೆಲಸ ಮಾಡುವ ಮಹಿಳೆ, ಒಂದು ದಿನದ ಮಟ್ಟಿಗೆ ತನ್ನ ಎಲ್ಲಾ ಕಷ್ಟ ನೋವುಗಳನ್ನು ಮರೆತು ತಮಗೆ ಇಷ್ಟವಾದ ಸ್ಪರ್ಧೆಯಲ್ಲಿ ಭಾಗವಹಿಸಿ ಆಟವಾಡುವ ಮೂಲಕ ಸಂತೋಷಪಟ್ಟಿದ್ದಾರೆ.