ಬೆಳಗಾವಿ : ಎಲ್ಲ ಜಾತಿ, ಧರ್ಮದವರನ್ನು ಯಾವುದೇ ಬೇಧ-ಭಾವ ಇಲ್ಲದೆ ಎಲ್ಲರನ್ನೂ ಸಮಾನತೆ ದೃಷ್ಠಿಯಿಂದ ಪರಿಗಣಿಸಿ, ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ವಿಭಿನ್ನವಾಗಿರುವ ಏಕೈಕ ಪಕ್ಷ ಬಿಜೆಪಿ ಎಂದು ಮಹಿಳಾ ಮತ್ತು ಮಕ್ಕಳ್ಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಧರ್ಮನಾಥ ಸಭಾಭವನದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲರೂ ಒಂದೇ.. ಸಣ್ಣ ಕಾರ್ಯಕರ್ತರೂ ಇಲ್ಲಿ ರಾಷ್ಟ್ರ ಮಟ್ಟದ ನಾಯಕನಾಗಿ ಬೆಳೆಯಲು ಅವಕಾಶವಿದೆ. ಭಾರತರತ್ನ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ಪಾಜಪೇಯಿ ಅವರು ದೇಶದ ಪ್ರಗತಿಗೆ ವೇಗ ನೀಡಿದ್ದರು.
ಆದರೆ, ದುರಾದೃಷ್ಟ ಅವರ ನೇತೃತ್ವದ ಸರ್ಕಾರ ಮುಂದುವರಿಯಲಿಲ್ಲ. ಆದ್ರೆ, ಇದೀಗ ವಾಜಪೇಯಿ ಅವರು ಕಂಡ ದೇಶಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತೊಡಗಿದ್ದಾರೆ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಜನಧನ ಯೋಜನೆಯಡಿ 38 ಕೋಟಿ ಮಹಿಳೆಯರಿಗೆ ಮೂರು ತಿಂಗಳು, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಎಲ್ಲ ಬಡ ಜನತೆಗೆ ಗ್ಯಾಸ್ ಸಿಲಿಂಡರ್ ನೀಡಲು 2014ರಲ್ಲಿ ಗಿವ್ ಇಟ್ ಅಫ್ ಆಂದೋಲನ ಆರಂಭಿಸಿ, ನಂತರ ಉಜ್ವಲಾ ಯೋಜನೆಯಡಿ ಕೋಟ್ಯಂತರ ತಾಯಂದಿರ ಕಣ್ಣೀರು ಒರೆಸಿದ್ದಾರೆ. ಅಂತಹ ಎಲ್ಲ ಜನಪರ ಕಾರ್ಯಗಳ ಜಾಗೃತಿ ಮೂಡಿಸುವ ಮೂಲಕ ಕಾರ್ತಕರ್ತರನ್ನು ನಾಯಕರನ್ನಾಗಿ ಮಾಡಿ, ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಮಹಿಳೆಯರು ಸಹ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ಮುಂದೆ ಬರಬೇಕು. ಪಂಜಾಯತ್ ಮಟ್ಟದಲ್ಲಿ ಅರ್ಧದಷ್ಟು ಮೀಸಲಾತಿ ಇದ್ದರೂ ಸಭೆಯಲ್ಲಿ ಮಾತ್ರ ಕೇವಲ ಶೇ.5ರಷ್ಟು ಮಹಿಳೆಯರು ಪಾಲ್ಗೊಂಡಿರುವುದು ಬೇಸರದ ಸಂಗತಿ. ಆದಷ್ಟು ಬೇಗ ಮಹಿಳಾ ಕಾರ್ಯಕರ್ತರು ರಾಜಕೀಯ ಚಟುವಟಿಕೆಗಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.