ಬೆಳಗಾವಿ: ಇಡೀ ಗ್ರಾಮಸ್ಥರು ಆರಾಧಿಸುವ ಗ್ರಾಮದೇವಿ ಸನ್ನಿಧಿಯ ಮುಂದೆಯೇ ಕಿರಾತಕರು ವಾಮಾಚಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಮಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಅಮವಾಸ್ಯೆ ಹಿನ್ನೆಲೆಯಲ್ಲಿ ಕಾಮಸಿನಕೊಪ್ಪ ಗ್ರಾಮದ ಗಿರಿಜಾದೇವಿ ದೇವಸ್ಥಾನದ ಮುಂದೆ ಮಧ್ಯರಾತ್ರಿ ಹುಂಜ ಕೊಯ್ದು ದೇವಸ್ಥಾನದ ಬಾಗಿಲಿಗೆ ರಕ್ತ ಸಿಂಪಡಣೆ ಮಾಡಲಾಗಿದೆ. ನಿಂಬೆಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನಿಟ್ಟು ಪೂಜೆ ಸಲ್ಲಿಸಲಾಗಿದೆ. ಅಲ್ಲದೇ, ದೇವಸ್ಥಾನದ ಸುತ್ತಲೂ ನಿಂಬೆಹಣ್ಣು ಇಟ್ಟು ಮಾಟ ಮಂತ್ರ ಮಾಡಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಬೆಳಗ್ಗೆ ಈ ದೃಶ್ಯಕಂಡು ಗಾಬರಿಗೊಂಡಿರುವ ಗ್ರಾಮಸ್ಥರು, ಈ ಬಾರಿ ದೇವಿಗೆ ನವರಾತ್ರಿ ಪೂಜೆ ಮಾಡದಿರಲು ನಿರ್ಧರಿಸಿದ್ದಾರೆ.