ಚಿಕ್ಕೋಡಿ: ಗದ್ದೆಯಲ್ಲಿ ಬೇಸಾಯದೊಂದಿಗೆ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತನ ಕೋಳಿಗಳ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿದ್ದು, 100 ಕೋಳಿಗಳು ಸಾವನಪ್ಪಿರುವ ಘಟನೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ನಡೆದಿದೆ.
ವಿಲಾಸ ಚೌಹಾಣ ನಷ್ಟ ಅನುಭವಿಸಿರುವ ರೈತ. ಈತ ರಾತ್ರಿ ಊಟಕ್ಕೆಂದು ಗದ್ದೆಯಿಂದ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕೋಳಿ ಸಾಕಾಣೆ ಮಾಡುವ ಶೆಡ್ಗೆ ನಾಲ್ಕಾರು ಕಾಡು ಪ್ರಾಣಿಗಳು ದಾಳಿ ಮಾಡಿ, 100 ಕೋಳಿಗಳನ್ನು ತಿಂದು ಹಾಕಿವೆ. ಘಟನೆಯಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಇದರಿಂದ ನೊಂದ ರೈತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೊರೆ ಹೋದರೂ ಯಾರೊಬ್ಬರು ಇವನ ಸಹಾಯಕ್ಕೆ ಬಂದಿಲ್ಲ. ಅಷ್ಟೇ ಅಲ್ಲದೆ ಕೋಳಿ ಸಾಕಾಣಿಕೆಗೆಲ್ಲ ಸರ್ಕಾರದಿಂದ ಯಾವುದೇ ನೆರವು ದೊರಕುವುದಿಲ್ಲ ಎಂದು ಹೇಳಿ ಕಳಿಸಿದ್ದು, ರೈತ ಬೇಸತ್ತಿದ್ದಾನೆ.