ಅಥಣಿ: ಅನರ್ಹ ಶಾಸಕ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇಂದು ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಮಹೇಶ್ ಕುಮ್ಮಟ್ಟಳ್ಳಿ, ಸಮ್ಮಿಶ್ರ ಸರ್ಕಾರದಲ್ಲಿ ಅಥಣಿ ಭಾಗಕ್ಕೆ ಅನ್ಯಾಯವನ್ನು ಖಂಡಿಸಿ ನಾನು ರಾಜಿನಾಮೆಗೆ ಸಿದ್ಧನಾದೆ ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಈ ವಿಷಯ ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಚರ್ಚೆ ಬೇಡ, ಅಥಣಿ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಏನು ಪರಿಹಾರ ದೊರಕಬೇಕಾಗಿದೆ ಅದನ್ನು ಖಂಡಿತವಾಗಿಯೂ ದೊರಕಿಸಿಕೊಡಲಾಗುವುದು ಎಂದರು.
ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಜಾರಕಿಹೊಳಿ, ನನ್ನ ನಂಬಿ ಬಂದವರಿಗೆ ದ್ರೋಹವಾಗಲು ನಾನು ಬಿಡವುದಿಲ್ಲ. ನೀವು ನನ್ನ ಮೇಲಿನ ಅಭಿಮಾನದಿಂದ 25000 ಅಂತರದಿಂದ ಮಹೇಶ್ ಕುಮಟಳ್ಳಿ ಅವರನ್ನು ಪುನಃ ಆಯ್ಕೆ ಮಾಡಿ ಕೊಡಬೇಕೆಂದು ವಿನಂತಿಸಿ ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೂ ನಾನು ಸಹಿಸೋಲ್ಲ ಎಂದರು.
ಲಕ್ಷ್ಮಣ್ ಸವದಿ ವಿಚಾರವಾಗಿ ಮಾತನಾಡಿ, ಮಹೇಶ್ ಕುಮ್ಮಟ್ಟಳ್ಳಿಗೆ ಬೈದಿದ್ದು ತಪ್ಪು. ಯಾರೇ ಆಗಲಿ ಆ ರೀತಿ ಅಸಭ್ಯ ಪದಗಳನ್ನ ಬಳಕೆ ಮಾಡಬಾರದು ಎಂದು ಹೇಳಿದರು.