ಬೆಳಗಾವಿ : ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ರೋಗಕ್ಕೆ ವಿಶೇಷ ಗಮನ ಕೊಡಲಾಗಿದೆ. ಇದರಿಂದ ರಾಜ್ಯದಲ್ಲಿ ಒಂದು ಸಾವು ಸಂಭವಿಸಿದೆ. ಹೊರ ದೇಶದಿಂದ ಆಗಮಿಸಿದವರ ಮೇಲೆ ನಿಗಾ ಇಡಲಾಗಿದೆ. ಸರ್ಕಾರದಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರನ್ನು ವಿಶೇಷವಾಗಿ ತಪಾಸಣೆ ಮಾಡಲಾಗುತ್ತಿದೆ. ಹಲವರ ಮೇಲೆ ಈಗಾಗಲೇ ನಿಗಾ ಇಡಲಾಗಿದೆ ಎಂದರು.
ಪಾಟೀಲ್ ಪುಟ್ಟಪ್ಪನವರ ಆರೋಗ್ಯವನ್ನು ವಿಚಾರಿಸಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಮಾಡಲಾಗುವುದು. ಅದ್ದೂರಿ ಮದುವೆ ಕುರಿತು ಪ್ರತಿಕ್ರಿಯಿಸಿದ ಅವರು, ಮದುವೆಗಳಿಗೆ,ಸಭೆ ಸಮಾರಂಭಕ್ಕೆ ಆದಷ್ಟು ಕಡಿಮೆ ಜನ ಪಾಲ್ಗೊಂಡರೆ ಉತ್ತಮ ಎಂದರು.