ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಮನೆಯೊಂದರ ಮೇಲೆ ಗೋಡೆ ಕುಸಿದ ಘಟನೆ ಗೋಂದಳಿ ಗಲ್ಲಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
![Wall fell down due to Heavy rain](https://etvbharatimages.akamaized.net/etvbharat/prod-images/09:33:10:1597507390_kn-bgm-6-15-gode-kusita-rakshane-7201786_15082020213127_1508f_1597507287_128.jpg)
ಮಳೆಯಿಂದ ಕುಸಿದ ಗೋಡೆ ಪಕ್ಕದ ಮನೆ ಮೇಲೆ ಬಿದ್ದಿದೆ. ಗೋಂದಳಿ ಗಲ್ಲಿಯ ಶಶಿಕಲಾ ಸುರೇಕರ ಎಂಬುವವರ ಮನೆ ಮೇಲೆ ಗೋಡೆ ಕುಸಿದಿದೆ. ಪರಿಣಾಮ ಮನೆಯಲ್ಲಿ 12 ಜನರು ಸಿಲುಕಿಕೊಂಡಿದ್ದರು. ತಕ್ಷಣವೇ ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮನೆಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಿ ಹೊರತಂದಿದ್ದಾರೆ. ಆದರೆ ಆಸ್ತಿಪಾಸ್ತಿ ಮಣ್ಣೊಳಗೆ ಹುದುಗಿಹೋಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ಸಂಭವಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಗೋಂದಳಿಗಲ್ಲಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.