ETV Bharat / state

ಧಾರವಾಡ ಪ್ರವೇಶಕ್ಕೆ ಅನುಮತಿ ಸಿಗದಿದ್ದರೆ ಹೊರಗಿದ್ದೇ ಚುನಾವಣೆ ಕಣಕ್ಕಿಳಿಯುತ್ತೇನೆ: ಮಾಜಿ ಸಚಿವ ವಿನಯ ಕುಲಕರ್ಣಿ..

author img

By

Published : Oct 8, 2022, 6:50 PM IST

ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ‌ ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಿಸಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

KN_BGM
ವಿನಯ ಕುಲಕರ್ಣಿ

ಬೆಳಗಾವಿ: 2023ರ ವಿಧಾನಸಭೆ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ‌. ಧಾರವಾಡ ಪ್ರವೇಶಕ್ಕೆ ‌ಅನುಮತಿ ಸಿಗದಿದ್ದರೂ ಹೊರಗಿದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಿಸುವುದಿಲ್ಲ ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಷ್ಟರಲ್ಲೇ, ನನಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ‌. ಒಂದು ವೇಳೆ ಪ್ರವೇಶಕ್ಕೆ ಅನುಮತಿ ಇಲ್ಲದಿದ್ದರೂ ಹೊರಗಿದ್ದೆ ಚುನಾವಣೆ ಕಣಕ್ಕಿಳಿಯುವೆ ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾಯಿಸುವುದಿಲ್ಲ ಎಂದರು.

ಪಂಚಮಸಾಲಿ ಮೀಸಲು ಕ್ರೆಡಿಟ್​ ಫೈಟ್: ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು. ಇನ್ನು ಪಂಚಮಸಾಲಿ ಮೀಸಲಾತಿ ಫೈಟ್‍ನಲ್ಲಿ ಕ್ರೆಡಿಟ್ ವಾರ ನಡೆಯುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನಂತೂ ಎಂದಿಗೂ ಕ್ರೆಡಿಟ್ ಸಿಗುತ್ತೆ ಎಂದು ಹೋಗುವ ಮನುಷ್ಯ ಅಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಇವತ್ತು ನಾನು ಎಲ್ಲ ಸಮಾಜಗಳ ಜೊತೆಗೂ ಇದ್ದೇನೆ. ಒಂದೇ ಸಮಾಜದ ಪರವಾಗಿ ನಾನು ಕೆಲಸ ಮಾಡಿಲ್ಲ. ಎಲ್ಲಾ ಸಮಾಜ, ವರ್ಗಗಳ ಜೊತೆಗೆ ಸೇರ ರಾಜಕೀಯಕ್ಕೆ ಬಂದಿದ್ದೇನೆ.

ರಾಜಕೀಯ ಸೇರಿ ವಿವಿಧ ವಿಚಾರಗಳ ಕುರಿತು ವಿನಯ ಕುಲಕರ್ಣಿ ಮಾತನಾಡಿದರು

ಎಲ್ಲಾ ಸಮಾಜಗಳ ಜನರು ಕೂಡ ಅಷ್ಟೇ ನನ್ನನ್ನು ಪ್ರೀತಿಸುತ್ತಾರೆ. ಒಂದೇ ಸಮಾಜ ಫಿಕ್ಸ್​​ ಇಟ್ಟುಕೊಂಡು ನಾವು ಯಾವತ್ತೂ ಹೋರಾಟ ಮಾಡಲು ಆಗೋದಿಲ್ಲ. ಎಲ್ಲ ಸಮಾಜದವರಿಗೂ ಅವರವರ ಯೋಗ್ಯತೆ ಅನುಸಾರ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲಿ ಎಂಬುದಕ್ಕೆ ನಮ್ಮ ಹೋರಾಟ ಎಂದರು.

ಒಂದೇ ಸಮಾಜ ಅಲ್ಲ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದು, ಕುರುಬ ಸಮಾಜ ಎಸ್‍ಟಿಗೆ ಸೇರಿಸುವುದು ಸೇರಿ ಸಾಕಷ್ಟು ಸಮಾಜಗಳ ಹೋರಾಟ ನಡೆಯುತ್ತಿದೆ. ಎಲ್ಲ ಸಮಾಜಗಳ ಬಗ್ಗೆ ತುಲನೆ ಮಾಡಿ ನ್ಯಾಯ ಕೊಡಿಸಬೇಕು.

ನಿರಂತರವಾಗಿ 8 ತಿಂಗಳಿನಿಂದ ವಾಲ್ಮೀಕಿ ಸಮಾಜದ ಸ್ವಾಮೀಜಿ ಧರಣಿ ಕುಳಿತಿದ್ದರು. ಅವರು ಗಟ್ಟಿತನದಿಂದ ಕುಳಿತಿದ್ದರಿಂದ ಇಂದು ಜಯ ಸಿಕ್ಕಿದೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಹಲವಾರು ಸಮಾಜಗಳ ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್‍ನಲ್ಲಿ ಸೀಟ್ ತೆಗೆದುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ವಿದ್ಯಾಕಾಶಿ ಧಾರವಾಡಕ್ಕೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಹೀಗೆ ಬರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಕೂಡ ಹಾಸ್ಟೇಲ್‍ನಲ್ಲಿ ಸೀಟ್ ಕೊಡಿಸಿದ್ದೇನೆ.

ಇವತ್ತು ಆ ಪರಿಸ್ಥಿತಿ ಇಲ್ಲ: ಇವತ್ತು ಆ ಪರಿಸ್ಥಿತಿ ಇಲ್ಲ. ಶೇ.100ರಷ್ಟು ಮೆರಿಟ್ ಮೇಲೆ ಹಾಸ್ಟೇಲ್‍ನಲ್ಲಿ ಸೀಟ್ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಕೂಲಿ ಕಾರ್ಮಿಕರು, ಬಡವರ ಮಕ್ಕಳು ಬಂದರೆ ಅವರಿಗೆ ಹಾಸ್ಟೇಲ್ ಕೊಡಲು ಕೂಡ ಅಸಾಧ್ಯ. ಹಾಸ್ಟೇಲ್ ಸೀಟ್‍ನಲ್ಲಿ ಜನರಲ್ ಮೆರಿಟ್‍ಗೆ 96 ಪರ್ಸೆಂಟ್‍ಗೆ ನಿಂತಿದೆ. ಹೀಗಾಗಿ ಬಡವರ ಮಕ್ಕಳನ್ನು ಹೊರಗೆ ರೂಮ್, ಪಿಜಿ ಮಾಡಿ ಕಲಿಸಲು ಬಡವರಿಗೆ ಸಾಧ್ಯವಾಗುತ್ತಾ ಎಂಬುದನ್ನು ಗಮನಿಸಬೇಕಿದೆ.

ನಾವ್ಯಾರು ಶ್ರೀಮಂತರಿಗೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಯಾರು ಬಡವರಿದ್ದಾರೆ, ಅವರ ಯೋಗ್ಯತೆ, ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಒಂದು ಕಾನೂನು ತರಬೇಕು. ಎಲ್ಲ ಸಮಾಜಗಳಲ್ಲಿಯೂ ಬಡವರಿದ್ದಾರೆ. ಹೀಗಾಗಿ ಬಡತನ ರೇಖೆಯಲ್ಲಿ ಕಡಿಮೆ ಇದ್ದವರಿಗೆ ಅವರ ವಿದ್ಯಾಭ್ಯಾಸಕ್ಕೆ ಮೊದಲ ಆಧ್ಯತೆ ಕೊಡಬೇಕು. ಅದೇ ರೀತಿ ಸರ್ಕಾರಿ ಉದ್ಯೋಗದಲ್ಲಿಯೂ ಮೀಸಲಾತಿ ಸಿಗಬೇಕು ಎಂದರು.

ಇನ್ನು ತಮ್ಮ ಪಾರ್ಮ್​ನಲ್ಲಿರುವ ಜಾನುವಾರುಗಳ ನೆನೆದು ಬಾವುಕರಾದ ಅವರು, ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಪಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ ಎಂದು ಧಾರಾವಾಡದ ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನ ನೆನೆದು ವಿನಯ ಕುಲಕರ್ಣಿ ಭಾವುಕರಾದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ಹಸುಗಳನ್ನು ಸಾಕಿದ್ದೇನೆ. ಇಷ್ಟು ದಿನ ಫಾರ್ಮ‌್‌ಗೆ ಹೋಗದೇ ಇರುವುದು ತುಂಬಾ ನೋವು ತರಿಸಿದೆ ಎಂದು ಭಾವುಕರಾದರು.

ಇದನ್ನೂ ಓದಿ: ಎಸ್​ಸಿ ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ: ತಕ್ಷಣ ಆದೇಶ ಹೊರಡಿಸಲು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.