ಬೆಳಗಾವಿ: ಇಂದು ಬೆಳಗ್ಗೆ ಸುವರ್ಣ ವಿಧಾನಸೌಧದ ಮುಂದೆ ಏಕಾಂಗಿ ಆಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹಿರೇಬಾಗೇವಾಡಿ ಟೋಲ್ ಬಳಿ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಹಿರೇಬಾಗೇವಾಡಿ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ.
ಓದಿ:ಉಪಚುನಾವಣೆ ಕಾದಾಟದ ಬಳಿಕ ಮತ್ತೆ ಜೊತೆಗೂಡಿದ ಜಾರಕಿಹೊಳಿ ಬ್ರದರ್ಸ್
ಈ ವೇಳೆ ಪೊಲೀಸ್ ಠಾಣೆಯ ಆವರಣದಲ್ಲಿ ವಾಟಾಳ್ ನಾಗರಾಜ್, ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ಪದವಿ ಪರೀಕ್ಷೆ ರದ್ದು ಮಾಡಬೇಕು. ವಿದ್ಯಾರ್ಥಿಗಳಿಗೆ 50 ಲಕ್ಷ ಹಾಗೂ ಪ್ರಾಧ್ಯಾಪಕರಿಗೆ 2.5 ಲಕ್ಷ ಠೇವಣಿ ಇಡಬೇಕು ಎಂದು ಆಗ್ರಹಿಸಿದರು.