ETV Bharat / state

ನನಗೆ ಖಾತೆ ಇಂಪಾರ್ಟೆಂಟ್ ಅಲ್ಲ,‌ ಕೊಟ್ಟ ಖಾತೆ ನಿಭಾಯಿಸುವೆ: ಉಮೇಶ್​ ‌ಕತ್ತಿ - ಸಚಿವ ಸಂಪುಟದ ಬಗ್ಗೆ ಮಾತನಾಡಿದ ಶಾಸಕ ಉಮೇಶ್​ ಕತ್ತಿ

ಬಜೆಟ್ ಅಧಿವೇಶನ ಆದ ಮೇಲೂ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಹುಕ್ಕೇರಿ ಶಾಸಕ‌ ಉಮೇಶ್​ ‌ಕತ್ತಿ ಹೇಳಿದ್ದಾರೆ.

Umesh katti
ಉಮೇಶ್​ ‌ಕತ್ತಿ
author img

By

Published : Jan 29, 2020, 6:48 PM IST

ಬೆಳಗಾವಿ: ನನಗೆ ಖಾತೆ ಇಪಾರ್ಟೆಂಟ್ ಅಲ್ಲ, ಕೊಟ್ಟ ಖಾತೆಯನ್ನು ನಿಭಾಯಿಸುತ್ತೇನೆ. ಸಚಿವನಾದ್ರೆ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಹುಕ್ಕೇರಿ ಶಾಸಕ‌ ಉಮೇಶ್​ ‌ಕತ್ತಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಉಮೇಶ್​ ಕತ್ತಿ

ಬೆಳಗಾವಿ ‌ಜಿಲ್ಲೆಯ ಇಂಚಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ‌ ಉಮೇಶ್ ಕತ್ತಿ, ಯಾವುದೇ ಖಾತೆ ಕೊಟ್ಟರು ನಾನು ಅದನ್ನ ನಿರ್ವಹಿಸುತ್ತೇನೆ. ಇನ್ನೊಂದು ಡಿಸಿಎಂ ಸ್ಥಾನ ಸೃಷ್ಟಿ ಇಲ್ಲ ಅಂತ ಸಿಎಂ ಹೇಳಿದ್ದಾರೆ. ಡಿಸಿಎಂ ಹುದ್ದೆ‌ ಸೃಷ್ಟಿಸುವುದು, ಬಿಡುವುದು ಸಿಎಂಗೆ ಬಿಟ್ಟ ವಿಚಾರ, ಸಿಎಂ ತೀರ್ಮಾನವೇ ಅಂತಿಮ. ಗೆದ್ದ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಸಾಧ್ಯವಾದಷ್ಟು ಸಿಎಂ ಪ್ರಯತ್ನ ಮಾಡ್ತಾರೆ ಎಂದ ಅವರು, ಬಜೆಟ್ ಅಧಿವೇಶನ ಆದ ಮೇಲೂ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.

ದೆಹಲಿಯಲ್ಲಿ ಅಮಿತ್ ಶಾ, ಜೆ.ಪಿ ನಡ್ಡಾ, ಸಂತೋಷ್‌ಜಿ ಎಲ್ಲರನ್ನೂ ಭೇಟಿಯಾಗಿ ಬಂದಿದ್ದೇನೆ. ಹೊಸಬರಿಗೆ ಸಚಿವ ಸ್ಥಾನ ಕೊಡಲು ಹಳಬರ ಪದತ್ಯಾಗ ಕುರಿತಾದ ಪ್ರಶ್ನೆಗೆ ಅವೆಲ್ಲಾ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ವೈಯಕ್ತಿಕವಾಗಿ ನನಗೆ ಸಚಿವ ಸ್ಥಾನ ಕೊಡ್ತೀನಿ ಅಂದಿದ್ದಾರೆ ಅದನ್ನು ಸ್ವಾಗತಿಸುವೆ. ಸೋತವರಿಗೆ ಸಚಿವ ಸ್ಥಾನ ಕೊಡಲು ಬರುವುದಿಲ್ಲ. ಶಾಸಕರಾಗಿ ಆಯ್ಕೆ ಆದ ಮೇಲೆ ಅವರನ್ನು ಮಂತ್ರಿ ಮಾಡುವುದು ಪರಿಪಾಟ. ಗೆದ್ದವರಿಗೂ ಕೊಡಿ ಮನೆಯಲ್ಲಿದ್ದವರಿಗೂ ಸಚಿವ ಸ್ಥಾನ ಕೊಡಿ ಎಂದರೆ ಹೇಗೆ ಸಾಧ್ಯ? ಎಂದು ಉಮೇಶ ಕತ್ತಿ ಪ್ರಶ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.