ಬೆಳಗಾವಿ: ಅಕ್ರಮ ಸಂಬಂಧ ಪ್ರಕರಣ ಸಂಬಂಧ ಜೋಡಿ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಪಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇದೇ ಗ್ರಾಮದ ಲಕ್ಷ್ಮಿ ಜ್ಞಾನೇಶ್ವರ ನಾಯಕ (25) ಮತ್ತು ಕೃಷ್ಣ ನಾಯಿಕ (22)ಕೊಲೆಯಾದವರು. ಲಕ್ಷ್ಮಿ ಪತಿ ಜ್ಞಾನೇಶ್ವರ ನಾಯಕ ತನ್ನ ಸ್ನೇಹಿತರ ಜೊತೆಗೂಡಿ ಇಬ್ಬರನ್ನು ಕೊಲೆ ಮಾಡಿದ್ದಾರೆ.
ಗುಟ್ಟು ರಟ್ಟು:
ಲಕ್ಷ್ಮಿ, ಕೃಷ್ಣ ಮಧ್ಯೆ ಅನೈತಿಕ ಸಂಬಂಧ ಇತ್ತು. ಇಬ್ಬರು ಒಟ್ಟಿಗೆ ಇದ್ದುದ್ದನ್ನು ಗಮನಿಸಿದ ಲಕ್ಷ್ಮಿ ಪತಿ ಜ್ಞಾನೇಶ್ವರ್ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಸ್ನೇಹಿತರ ಎದುರು ಜ್ಞಾನೇಶ್ವರ ಈ ವಿಷಯ ತಿಳಿಸಿದ್ದಾನೆ. ಬಳಿಕ ಕೃಷ್ಣಾನನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ಪತ್ನಿಯನ್ನು ಮನೆಗೆ ಕರೆತಂದು ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.