ETV Bharat / state

ಚಿಕ್ಕೋಡಿಯಲ್ಲಿ ಬೈಕ್ - ಟೆಂಪೋ ನಡುವೆ ಅಪಘಾತ; ಮೂವರ ಸಾವು - ಈಟಿವಿ ಭಾರತ ಕನ್ನಡ

ಟ್ರಕ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.

ಕೃಷ್ಣ ನದಿಗೆ ಬಿದ್ದ ಒಮಿನಿ ಕಾರ್​
ಕೃಷ್ಣ ನದಿಗೆ ಬಿದ್ದ ಒಮಿನಿ ಕಾರ್​
author img

By

Published : Jun 14, 2023, 2:32 PM IST

Updated : Jun 14, 2023, 2:55 PM IST

ಚಿಕ್ಕೋಡಿ: ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಯುವಕರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದಲ್ಲಿ ಕೇರೂರು ಗ್ರಾಮದ ಪ್ರಶಾಂತ ಬೈರು ಖೋತ(22), ಸತೀಶ ಕಲ್ಲಪ್ಪ ಹಿರೇಕೊಡಿ(23), ಯಲಗೌಡ ಚಂದ್ರಕಾಂತ ಪಾಟೀಲ (22) ಮೃತ ದುರ್ದೈವಿಗಳು.

ಯುವಕರು ಬೈಕ್​​ ಮೇಲೆ ಚಿಕ್ಕೋಡಿ ಕಡೆಯಿಂದ ಕೇರೂರು ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ ಅಂಕಲಿ ರಸ್ತೆಯ ಬಸವನಾಳಗಡ್ಡೆ ಬಳಿ ಟೆಂಪೋ ಮತ್ತು ಬೈಕ ನಡುವೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ ಒಬ್ಬ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟ್ರಕ್ ಬೈಕ್ ನಡುವೆ ಅಪಘಾತ : ಟ್ರಕ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ಟ್ರಕ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡಿದ್ದಾರೆ. ರಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪ ಬಾಂವಿ (31) ಮೃತರು, ರಾಕೇಶ್​ ಬಸಪ್ಪ ಖೋತ ಗಾಯಗೊಂಡ ಸವಾರ. ಮಲ್ಲಿಕಾರ್ಜುನ ತನ್ನ ಬೈಕ್‌ ಅನ್ನು ರಿಪೇರಿಗಾಗಿ ರಾಕೇಶ್​ ಎಂಬುವವರ ಬೈಕ್‌ಗೆ ಹಗ್ಗ ಕಟ್ಟಿ ಅಥಣಿ ಕಡೆ ಸಾಗುವಾಗ ಅಪಘಾತ ಸಂಭವಿಸಿದೆ. ಮಲ್ಲಿಕಾರ್ಜುನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲೇ ಅಸುನೀಗಿದ್ದಾರೆ. ಗಾಯಾಳುವನ್ನು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣ ನದಿಗೆ ಬಿದ್ದ ಒಮಿನಿ ಕಾರ್ : ಚಾಲಕನ ನಿಯಂತ್ರಣ ತಪ್ಪಿ ಒಮಿನಿ ಕಾರೊಂದು ಕೃಷ್ಣಾ ನದಿಗೆ ಬಿದ್ದಿರುವ ಘಟನೆ ನಡೆದಿದ್ದು, ಪವಾಡ ಸದೃಶ ಎಂಬಂತೆ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ದಾಟುವಾಗ ಈ ಘಟನೆ ಸಂಭವಿಸಿದೆ.

ಮಾಂಜರಿಯಿಂದ ಭಾವನಸವದತ್ತಿ ಗ್ರಾಮಕ್ಕೆ ಹೊರಟಿದ್ದ ಒಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಕಾರಿನಲ್ಲಿ ಒಂದೆ ಕಟುಂಬದ ಏಳು ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟ ಎಂಬಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಾಂಜರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಗಾಢ ನಿದ್ದೆಯಲ್ಲಿದ್ದವರ ಮೇಲೆ ಹರಿದ JCB: ಮೂವರ ದಾರುಣ ಸಾವು

Last Updated : Jun 14, 2023, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.