ETV Bharat / state

ಸುತ್ತಿಗೆಯಿಂದ ಹೊಡೆದು ಕೊಲೆಗೈದ ಮೂವರು ಆರೋಪಿಗಳ ಬಂಧನ

ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ.

ಕಲ್ಲಿನ ಕ್ವಾರಿಯಲ್ಲಿ ಶವ ಹುಡುಕಾಡುತ್ತಿರುವ ಸಿಬ್ಬಂದಿ
author img

By

Published : Apr 2, 2019, 1:16 PM IST

ಚಿಕ್ಕೋಡಿ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಕಲ್ಲಿನ ಕ್ವಾರಿಯಲ್ಲಿ ಎಸೆದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಬನಾಗನೂರು ಗ್ರಾಮದ ಅರವಿಂದ ಪೋಳ (39) ಕೊಲೆಗೀಡಾದ ವ್ಯಕ್ತಿ. ನಿಪ್ಪಾಣಿ ತಾಲೂಕಿನ ನಾಗನೂರು ಗ್ರಾಮದ ಸತೀಶ ಶಹಾಜಿ ಕ್ಷೀರಸಾಗರ (20), ರವಿ ಈರಣ್ಣಾ ಶಿರಗಾವಿ (20) ಮತ್ತು ಸೌರವ ಅಜೀತ ಅಥಣಿ (20) ಬಂಧಿತ ಆರೋಪಿಗಳು.

ಕಲ್ಲಿನ ಕ್ವಾರಿಯಲ್ಲಿ ಶವ ಹುಡುಕಾಡುತ್ತಿರುವ ಸಿಬ್ಬಂದಿ

ನಿಪ್ಪಾಣಿ ತಾಲೂಕಿನಲ್ಲಿಭಾನುವಾರ ಮಧ್ಯಾಹ್ನ ಮೂವರು ಯುವಕರು ಸುತ್ತಿಗೆಯಿಂದ ಅರವಿಂದನನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ನಾಗನೂರು ಸರಹದ್ದಿನಲ್ಲಿರುವ ಎಸ್​ಎಂ ಕಾಲೇಜು ಬಳಿ ಇರುವ ಕ್ವಾರಿಯಲ್ಲಿ ಎಸೆದು ಪರಾರಿಯಾಗಿದ್ದರು.

ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಚಿಕ್ಕೋಡಿ : ಮೂವರು ಯುವಕರು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಕಲ್ಲಿನ ಕ್ವಾರಿಯಲ್ಲಿ ಎಸೆದ ಘಟನೆ ನಿಪ್ಪಾಣಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ. ನಾಗನೂರು ಗ್ರಾಮದ ಅರವಿಂದ ಪೋಳ(39) ಕೊಲೆಯಾದ ವ್ಯಕ್ತಿ. ಇತನನ್ನು ನಿಪ್ಪಾಣಿ ತಾಲ್ಲೂಕಿನ ನಾಗನೂರ ಹದ್ದಿನಲ್ಲಿರುವ ಎಸ್ ಎಮ್ ಕಾಲೇಜು ಬಳಿ ಇರುವ ಕ್ವಾರಿಯಲ್ಲಿ ಶವ ಬಿಸಾಡಿದ್ದ ನಾಲ್ಕು ಜನ ಯುವಕರು ಈಗ ಪೋಲಿಸರ ಅತಿಥಿಯಾಗಿದ್ದಾರೆ. ನಿಪ್ಪಾಣಿ ತಾಲೂಕಿನ ನಾಗನೂರು ಗ್ರಾಮದ ಸತೀಶ ಶಹಾಜಿ ಕ್ಷೀರಸಾಗರ(20), ರವಿ ಈರಣ್ಣಾ ಶಿರಗಾವಿ(20) ಮತ್ತು ಸೌರವ ಅಜೀತ ಅಥಣಿ(20) ಈ ಮೂವರು ಯುವಕರನ್ನು ಪೊಲೀಸರು ವಶಪಡಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಮೂವರು ಯುವಕರು ಸುತ್ತಿಗೆಯಿಂದ ಅರವಿಂದನ ಕೊಲೆ ಮಾಡಿ ಮೃತದೇಹವನ್ನು ಚೀಲದಲ್ಲಿ ಹಾಕಿ ಕ್ವಾರಿಯಲ್ಲಿ ಎಸೆದಿರುತ್ತಾರೆಂದು ತಿಳಿದು ಬಂದಿದೆ. ಅಲ್ಲದೆ ಪ್ರಕರಣದಲ್ಲಿ ಇನ್ನೂ ಕೆಲವರು ಸಹಭಾಗಿಗಳಾಗಿದ್ದಾರೆಂದೂ ಸಹ ಕೇಳಿ ಬರುತ್ತಿದೆ.  ಈ ಕುರಿತು ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜಯ ಕೌಲಗಿ ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.