ಅಥಣಿ: ತಾಲೂಕಿನಲ್ಲಿ ಕೊರೊನಾ ವೈರಸ್ ಹಿನ್ನೆಲೆ ಸಾವಿರಾರು ಲೀಟರ್ ಹಾಲು ಸಾಗಾಟವಾಗದೆ, ಹೈನುಗಾರಿಕೆ ನಂಬಿದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ತಾಲೂಕಿನ ಮಹಿಷವಾಡಗಿ, ಜನವಾಡ, ನಂದೇಶ್ವರ, ಸತ್ತಿ, ಸವದಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಕೃಷ್ಣಾ ನದಿ ತೀರದ ರೈತರು ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಆದ್ರೆ ಲಾಕ್ಡೌನ್ ತರುವಾಯ ತಾಲೂಕಿನಲ್ಲಿ ಅನೇಕ ಗೌಳಿಗರಿಂದ ಸಂಗ್ರಹವಾದ ಹಾಲನ್ನು ಸಾಗಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಹಿಷವಾಡಗಿ ಗ್ರಾಮದ ಗೌಳಿಗ ಅನೀಲ ಶಿರಹಟ್ಟಿ ತಮ್ಮ ನೋವು ತೊಡಿಕೊಂಡಿದ್ದಾರೆ.
ತಾಲೂಕಿನ ದಕ್ಷಿಣ ಭಾಗಗಳ ಗ್ರಾಮಗಳ ಗೌಳಿಗರಿಂದ ಸಂಗ್ರಹವಾದ ಹಾಲು ಜಮಖಂಡಿ ತಾಲೂಕಿನ ಹಿಪ್ಪರಗಿ, ಮುಧೋಳ ತಾಲೂಕಿನ ಮಹಾಲಿಂಗಪೂರಕ್ಕೆ ಸಾಗಿಸಲಾಗುತ್ತದೆ. ಕೊರೊನಾ ವೈರಸ್ಗೆ ಹೆದರಿ ಹಿಪ್ಪರಗಿ ಡ್ಯಾಂ ಮೇಲಿನ ರಸ್ತೆ ಬಂದ್ ಮಾಡಿದ್ದರಿಂದ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದ ವಾಹನ ಬರುತ್ತಿಲ್ಲ. ಕೃಷ್ಣಾ ನದಿಯಲ್ಲಿ ಮಹಿಷವಾಡಗಿ-ರಬಕವಿ ಮಧ್ಯ ಸಂಚರಿಸಿ ಹಾಲು ಸಾಗಿಸಲು ಬೋಟ್ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಬೋಟ್ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ಬಂದ್ ಮಾಡಿದ್ದರಿಂದ ಗೌಳಿಗರು ಸಂಗ್ರಹವಾದ ಹಾಲನ್ನು ಕೃಷ್ಣಾ ನದಿಯಲ್ಲಿ ಸುರಿಯುತ್ತಿದ್ದಾರೆ.
ಈ ಭಾಗದ ನಾಲ್ಕು ಗ್ರಾಮಗಳಲ್ಲಿ ದಿನನಿತ್ಯ 8 ಸಾವಿರ ಲೀಟರ್ಗಳಿಗಿಂತಲೂ ಹಾಲು ಹೆಚ್ಚಿಗೆ ಸಂಗ್ರಹವಾಗುತ್ತದೆ. ಸಾಗಾಟದ ತೊಂದರೆ ಎದುರಾಗಿರುವುದರಿಂದ ರೈತರಿಂದ ಹಾಲನ್ನು ಸಂಗ್ರಹ ಮಾಡಿದರೂ ಸಾಗಿಸಲು ಯಾವುದೇ ಇಲಾಖೆಯವರು ಸಹಕಾರ ನೀಡುತ್ತಿಲ್ಲವಾದ್ದರಿಂದ ಗೌಳಿಗರು ರೈತರಿಂದ ಹಾಲು ಸಂಗ್ರಹ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೈನುಗಾರಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಅನೇಕ ಕುಟುಂಬಗಳು ತೊಂದರೆ ಅನುಭವಿಸಿ ಬೀದಿಗೆ ಬರುವಂತಾಗಿದೆ.
ಲಾಕ್ಡೌನ್ ಪಜೀತಿ...ಅಥಣಿಯಲ್ಲಿ ದಿನನಿತ್ಯ ವ್ಯರ್ಥವಾಗುತ್ತಿದೆ ಸಾವಿರಾರು ಲೀಟರ್ ಹಾಲು - The corona virus
ಲಾಕ್ಡೌನ್ ನಂತರ ಅಥಣಿ ತಾಲೂಕಿನಲ್ಲಿ ಅನೇಕ ಗೌಳಿಗರಿಂದ ಸಂಗ್ರಹವಾದ ಹಾಲನ್ನು ಸಾಗಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು,ಶೇಖರಿಸಿದ ಹಾಲನ್ನ ಕೃಷ್ಣಾ ನದಿಗೆ ಸುರಿಯುವಂತಹ ಪರಿಸ್ಥಿತಿ ಎದುರಾಗಿದೆ.