ETV Bharat / state

ಜಿನೈಕ್ಯರಾದ ರಾಷ್ಟ್ರಸಂತ ಚಿನ್ಮಯಸಾಗರಜೀ ಮಹರಾಜ!

ಸಲ್ಲೇಖನ ವ್ರತ ಮಾಡಿ ದೇಹಪರಿತ್ಯಾಗ ಮಾಡಿದ ಜೈನ ಮುನಿ ಶ್ರೀ ಚಿನ್ಮಯಸಾಗರ ಮಹಾರಾಜ ಅವರ ಅಂತ್ಯಕ್ರಿಯೆ ಮುನಿಶ್ರೀಗಳ ಪೂರ್ವಾಶ್ರಮ ಗ್ರಾಮದಲ್ಲಿ ನಡೆಯಿತು.

ಚಿನ್ಮಯಸಾಗರಜೀ ಮಹರಾಜರ ಅಂತಿಮ ಯಾತ್ರೆ
author img

By

Published : Oct 19, 2019, 9:55 PM IST

ಚಿಕ್ಕೋಡಿ : ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜ ಅಮರ ರಹೇ, ಜಂಗಲವಾಲೆ ಬಾಬಾ ಅಮರ ರಹೇ ಎಂಬ ಜಯ ಘೋಷಣೆಗಳೊಂದಿಗೆ ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರ ಅಂತಿಮ ಕ್ರಿಯೆಯು ಜೈನ ಧರ್ಮದ ವಿಧಿ ವಿಧಾನಗಳಂತೆ ಜಗೂಳ ಗ್ರಾಮದ ಮುನಿಶ್ರೀಗಳ ಪೂವಾರ್ಶಮದ ಮನೆ ಸಮೀಪ ಇರುವ ಹೊಲದಲ್ಲಿ ಆಚಾರ್ಯರು, ಮುನಿಶ್ರೀಗಳು, ಆರ್ಯಿಕಾ ಮಾತಾಗಳು, ಭಟ್ಟಾರಕರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಚಿನ್ಮಯಸಾಗರಜೀ ಮಹರಾಜರ ಅಂತಿಮ ಯಾತ್ರೆ

ಸಲ್ಲೇಖನ ಸ್ವೀಕರಿಸಿದ ಸ್ಥಳದಿಂದ ಗ್ರಾಮದ ಬೀದಿಗಳಲ್ಲಿ ವಾದ್ಯ, ಆನೆ, ಕುದುರೆಗಳೊಂದಿಗೆ ಮರೆವಣಿಗೆಯ ಮುಖಾಂತರ ಸಂಚರಿಸಿ ಜೀನೈಕ್ಯರಾಗುವ ಸ್ಥಳಕ್ಕೆ ಆಗಮಿಸಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುನಿಶ್ರೀಗಳ ಅಂತಿಮ ವಿಧಿ ವಿಧಾನಗಳು ಜರುಗಿದವು.

ಬಿಎಸ್​ವೈ ಸಂತಾಪ: ಜೈನ ಮುನಿ ಚಿನ್ಮಯ ಸಾಗರಜೀ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆದಿವಾಸಿಗಳ ಮತ್ತು ವಿವಿಧ ಸಮುದಾಯದ ಜನರಲ್ಲಿ ಅಹಿಂಸಾ ತತ್ತ್ವ ಬೋಧಿಸುವುದರ ಜೊತೆಗೆ ದುಶ್ಚಟಗಳಿಂದ ಮುಕ್ತರನ್ನಾಗಿಸಲು ಶ್ರಮಿಸಿದ ಅವರ ತತ್ತ್ವಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಪೂರ್ತಿ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹೀಗಿತ್ತುಚಿನ್ಮಯಸಾಗರಜೀ ಮಹರಾಜ ಜೀವನದ ಹಾದಿ

ಬಾಲ್ಯದಿಂದಲೇ ಆಧ್ಯಾತ್ಮದ ಒಲವು ಹೊಂದಿದ್ದ ಯುವಕ ಧರಣೇಂದ್ರ ಸನ್ಯಾಸ ದೀಕ್ಷೆ ಸ್ವೀಕರಿಸಿ ಮಧ್ಯಪ್ರದೇಶದ ಅರಣ್ಯಗಳಲ್ಲಿ ಕಠೋರ ತಪಸ್ಸು ಮಾಡಿ ಜಂಗಲ​​ವಾಲೆ ಬಾಬಾ ಎಂದೇ ಖ್ಯಾತಿ ಪಡೆವರು

ಜುಗೂಳ ಗ್ರಾಮ, ಮುನಿಶ್ರೀ ಜಂಗಲವಾಲೆ ಬಾಬಾ ಅವರ ಜನ್ಮ ಭೂಮಿ. ಅಣ್ಣಪ್ಪ ಪದ್ಮಣ್ಣ ಮೋಳೆ ಹಾಗೂ ಶ್ರೀಮತಿ ಹೀರಾಬಾಯಿ ದಂಪತಿ ಹಿರಿಯ ಪುತ್ರನಾಗಿ ಜನಿಸಿದರು. ಶ್ರೀಮತಿ ಹೀರಾಬಾಯಿ ಅವರ ಗರ್ಭ ಸಂಜಾತ ಶಿಶುವಿಗೆ ನಾಮಕರಣ ಮಾಡಿದ್ದು ಪಾರ್ಶ್ವನಾಥ. ಆದರೆ, ಎಲ್ಲರೂ ಅವರನ್ನು ಪ್ರೀತಿಯಿಂದ ಧರಣೇಂದ್ರ ಎಂದು ಕರೆದರು.

ಬೆಳೆವ ಕುಡಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಇವರ ಆಟ - ಪಾಠಗಳು ಚಟುವಟಿಕೆಗಳು ಮಾಮೂಲು ಬಾಲಕರಂತಿರಲಿಲ್ಲ. ಕ್ಷಣ ಹೊತ್ತು ಮನೆಯಲ್ಲಿರಲು ಒಪ್ಪುತ್ತಿರಲಿಲ್ಲ. ಜೈನ ಬಸದಿ ಜಮೀನು, ಕಬ್ಬಿನ ಗದ್ದೆಗಳು, ಕಾಡು ಮೇಡಿನಂಥಹ ಏಕಾಂತ ವಾಸ ಇವರಿಗೆ ಹೆಚ್ಚು ಪ್ರಿಯವಾಗಿತ್ತು. ಬೆಳೆಯುತ್ತಿದ್ದ ಬಾಲಕ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ ಪಕ್ಕದೂರಿನ ಕಾಗವಾಡದಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದರು. ಬಾಲ್ಯದಲ್ಲಿಯೇ ಎಲ್ಲ ಧರ್ಮಗಳ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ ಇವರು, ಜೈನ ವೀರಶೈವ ಧರ್ಮಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದರು.

1988ರಲ್ಲಿ ಮುನಿದೀಕ್ಷೆ : ಜುಗೂಳದಲ್ಲಿಯೇ ಜನಿಸಿದ್ದ ಚಿನ್ಮಯಸಾಗರ ಮಹರಾಜರು, ಜೈನ ಧರ್ಮದ ಅಹಿಂಸಾ ತತ್ತ್ವಗಳಿಗೆ ಆಕರ್ಷಿತರಾಗಿ 1988 ರ ಮಾರ್ಚ್‌ 31 ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ‍‍ಪಡೆದಿದ್ದರು. ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೊದಲಾದ ಕಡೆಗಳಲ್ಲಿ ತಲಾ ಎರಡು ವರ್ಷ, ಮಧ್ಯಪ್ರದೇಶದಲ್ಲಿ 15 ವರ್ಷ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 5 ವರ್ಷಗಳವರೆಗೆ ಆದಿವಾಸಿಗಳ ಮನಪರಿವರ್ತನೆ ಮಾಡಿದ್ದರು. ಹೆಚ್ಚು ಕಾಲ ಅರಣ್ಯ ಪ್ರದೇಶದಲ್ಲಿ ಸಮಯ ಕಳೆದಿದ್ದರಿಂದ ಅವರನ್ನು ಜಂಗಲವಾಲೆ ಬಾಬಾ ಎಂದು ಭಕ್ತರು ಕರೆಯುತ್ತಿದ್ದರು.

ಅರಣ್ಯಗಳಲ್ಲಿ ಕಠೋರ ತಪಸ್ಸು :
1995-96 ರಲ್ಲಿ ಮೂರು ತಿಂಗಳಗಳವರೆಗೆ ಮಹಾರಾಷ್ಟ್ರದ ಕುಂತಲಗಿರಿ ಸಮೀಪದ ಅರಣ್ಯದಲ್ಲಿ, ಡಿಸೆಂಬರ್ 2000 ದಿಂದ ಜನವರಿ 2001ರ ವರೆಗೆ ಟಡಾ ಕೆಸಲಿ ಅರಣ್ಯದಲ್ಲಿ ಘೋರ ಸಾಧನೆ, 2002 ಜೂನ್‍ನಲ್ಲಿ ಮಂಡಾಲಾ ಅರಣ್ಯದಲ್ಲಿ, 19 ಡಿಸೆಂಬರ್ 2005 ರಿಂದ 2 ಫೆಬ್ರವರಿ ಖಿಲಖಿಲಿಯಾ ಜಿಲ್ಲೆಯ ರಾಯಸೇನ ಅರಣ್ಯದಲ್ಲಿ ಮಹಾಸಾಧನೆ. 12 ನವೆಂಬರ್​ ಇಂದ ಡಿಸೆಂಬರ್ ವರೆಗೆ ಇಂದೌರ ಖಂಡ್ವಾ ಅರಣ್ಯದಲ್ಲಿ ತಪ ಸಾಧನೆ. 15 ಜುಲೈದಿಂದ 12 ಸೆಪ್ಟೆಂಬರ್ ಕೋಲಿಪುರ ಅರಣ್ಯದಲ್ಲಿ ತಪ ಸಾಧನೆ. ಇನ್ನು ಹಲವು ಅರಣ್ಯ ಪ್ರದೇಶದಲ್ಲಿ ತಪಸ್ಸು ಮಾಡಿದ್ದಾರೆ.

Intro:ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿಮಹರಾಜರ ಅಂತಿಮ ಯಾತ್ರೆBody:

ಚಿಕ್ಕೋಡಿ :
ಪ್ಯಾಕೇಜ್

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಜುಗೂಳ, ಕೃಷ್ಣಾ ನದಿ ತೀರದ ಒಂದು ಪುಟ್ಟ ಗ್ರಾಮ. ಎಲ್ಲಿ ನೋಡಿದರಲ್ಲಿ ಸಸ್ಯರಾಶಿ, ಭೂತಾಯಿ ಹಸಿರು ಸೀರೆಯನ್ನುಟ್ಟು ಮುಗುಳ್ನಗುತ್ತಿರವಂತೆ ಕಾಣುವ ನೋಟ. ನಿರಂತರ ಕೃಷಿ ಚಟುವಟಿಕೆ. ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಹಾಗೂ ಸಾಹಿತ್ಯಿಕವಾಗಿ ಅಷ್ಟೇನೂ ತೀವ್ರತೆ ಕಾಣದ ಜುಗೂಳ ಗ್ರಾಮದ ಓರ್ವ ಯುವಕ ಜೈನ ಧರ್ಮದ ಪತಾಕೆಯನ್ನು ಹಾರಿಸುವುದರೊಂದಿಗೆ ಸಾಹಿತ್ಯಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ರಾಂತಿ ಮಾಡಿ ವಿಶ್ವ ವಿಖ್ಯಾತನಾಗುತ್ತಾನೆ ಎಂದೂ ಯಾರೂ ಊಹಿಸಿರಲಿಲ್ಲ.

ಅವರೆ ಪರಮ ಪೂಜ್ಯ 108 ಚಿನ್ಮಯಸಾಗರ ಮಹಾರಾಜ. ಬಾಲ್ಯದಿಂದಲೇ ಆಧ್ಯಾತ್ಮದ ಒಲವು ಹೊಂದಿದ್ದ ಯುವಕ ಧರಣೇಂದ್ರ ಸನ್ಯಾಸ ದೀಕ್ಷೆ ಸ್ವೀಕರಿಸಿ ಮಧ್ಯಪ್ರದೇಶದ ಅರಣ್ಯಗಳಲ್ಲಿ ಕಠೋರ ತಪಸ್ಸು ಮಾಡಿ ಜಂಗಲ್‍ವಾಲೆ ಬಾಬಾ ಎಂದೇ ಖ್ಯಾತಿ ಪಡೆದರು.

ಜುಗೂಳ ಗ್ರಾಮ ಮುನಿಶ್ರೀ ಜಂಗಲವಾಲೆ ಬಾಬಾ ಅವರ ಜನ್ಮ ಭೂಮಿ. ಅಣ್ಣಪ್ಪ ಪದ್ಮಣ್ಣ ಮೋಳೆ ಹಾಗೂ ಶ್ರೀಮತಿ ಹೀರಾಬಾಯಿ ದಂಪತಿ ಹಿರಿಯ ಪುತ್ರನಾಗಿ ಜನಿಸಿದರು. ಶ್ರೀಮತಿ ಹೀರಾಬಾಯಿ ಅವರ ಗರ್ಭ ಸಂಜಾತ ಶಿಶುವಿಗೆ ನಾಮಕರಣ ಮಾಡಿದ್ದು ಪಾರ್ಶ್ವನಾಥ. ಆದರೆ, ಎಲ್ಲರೂ ಅವರನ್ನು ಪ್ರೀತಿಯಿಂದ ಧರಣೇಂದ್ರ ಎಂದು ಕರೆದರು.

ಬೆಳೆವ ಕುಡಿಯನ್ನು ಮೊಳಕೆಯಲ್ಲಿ ನೋಡು ಎಂಬಂತೆ ಬಾಲ್ಯದಲ್ಲಿಯೇ ಇವರ ಆಟ-ಪಾಠಗಳು ಚಟುವಟಿಕೆಗಳು ಮಾಮೂಲು ಬಾಲಕರಂತಿರಲಿಲ್ಲ. ಕ್ಷಣ ಹೊತ್ತು ಮನೆಯಲ್ಲಿರಲು ಒಪ್ಪುತ್ತಿರಲಿಲ್ಲ ಈ ಜೀವ, ಜೈನ ಬಸದಿ ಜಮೀನು, ಕಬ್ಬಿನ ಗದ್ದೆಗಳು, ಕಾಡು ಮೇಡಿನಂಥಹ ಏಕಾಂತ ವಾಸ ಇವರಿಗೆ ಹೆಚ್ಚು ಪ್ರಿಯವಾಗಿತ್ತು. ಬೆಳೆಯುತ್ತಿದ್ದ ಬಾಲಕ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ ಪಕ್ಕದೂರ ಕಾಗವಾಡದಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದರು. ಬಾಲ್ಯದಲ್ಲಿಯೇ ಎಲ್ಲ ಧರ್ಮಗಳ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ ಇವರು, ಜೈನ ವೀರಶೈವ ಧರ್ಮಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದರು.

1988ರಲ್ಲಿ ಮುನಿದೀಕ್ಷೆ : 

ಜುಗೂಳದಲ್ಲಿಯೇ ಜನಿಸಿದ್ದ ಚಿನ್ಮಯಸಾಗರ ಮಹರಾಜರು, ಜೈನ ಧರ್ಮದ ಅಹಿಂಸಾ ತತ್ವಗಳಿಗೆ ಆಕರ್ಷಿತರಾಗಿ 1988 ರ ಮಾರ್ಚ್‌ 31 ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ‍‍ಪಡೆದಿದ್ದರು. ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೊದಲಾದ ಕಡೆಗಳಲ್ಲಿ ತಲಾ ಎರಡು ವರ್ಷ, ಮಧ್ಯಪ್ರದೇಶದಲ್ಲಿ 15 ವರ್ಷ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 5 ವರ್ಷಗಳವರೆಗೆ ಆದಿವಾಸಿಗಳ ಮನಪರಿವರ್ತನೆ ಮಾಡಿದ್ದರು. ಹೆಚ್ಚು ಕಾಲ ಅರಣ್ಯ ಪ್ರದೇಶದಲ್ಲಿ ಸಮಯ ಕಳೆದಿದ್ದರಿಂದ ಅವರನ್ನು ಜಂಗಲವಾಲೆ ಬಾಬಾ ಎಂದು ಭಕ್ತರು ಕರೆಯುತ್ತಿದ್ದರು.

ಅರಣ್ಯಗಳಲ್ಲಿ ಕಠೋರ ತಪಸ್ಸು :

1995-96 ರಲ್ಲಿ ಮೂರು ತಿಂಗಳಗಳವರೆಗೆ ಮಹಾರಾಷ್ಟ್ರದ ಕುಂತಲಗಿರಿ ಸಮೀಪದ ಅರಣ್ಯದಲ್ಲಿ, ಡಿಸೆಂಬರ್ 2000 ದಿಂದ ಜನವರಿ 2001 ರ ವರೆಗೆ ಟಡಾ ಕೆಸಲಿ ಅರಣ್ಯದಲ್ಲಿ ಘೋರ ಸಾಧನೆ, 2002 ಜೂನ್‍ನಲ್ಲಿ ಮಂಡಾಲಾ ಅರಣ್ಯದಲ್ಲಿ, 19 ಡಿಸೆಂಬರ್ 2005 ರಿಂದ 2 ಫೆಬ್ರವರಿ ಖಿಲಖಿಲಿಯಾ ಜಿಲ್ಲೆಯ ರಾಯಸೇನ ಅರಣ್ಯದಲ್ಲಿ ಮಹಾಸಾಧನೆ. 12 ನವ್ಹೆಂಬರ ದಿಂದ 30 ಡಿಸೆಂಬರ್ ವರೆಗೆ ಇಂದೌರ ಖಂಡ್ವಾ ಅರಣ್ಯದಲ್ಲಿ ತಪ ಸಾಧನೆ 15 ಜುಲೈದಿಂದ 12 ಸೆಷ್ಟೆಂಬರ ಕೋಲಿಪುರ ಅರಣ್ಯದಲ್ಲಿ ತಪ ಸಾಧನೆ. 6 ಡಿಸೆಂಬರ 2009 ರಿಂದ 21 ಫೆಬ್ರುವರಿ 2010 ರವರೆಗೆ ಹಸ್ತಿನಾಪುರದ ಜಂಗಲನಲ್ಲಿ ತಪಸಾಧನೆ, ಜೂನ್ 29 ರಿಂದ 13 ಜುಲೈ 2010 ರವರೆಗೆ ಋಷಿಕೇಶ ಮುನಿಯವರ ರೇತಿ ಎಂಬ ಜಂಗಲನಲ್ಲಿ ತಪಸಾಧನೆ. 3 ಜುಲೈ 2011 ರಿಂದ 30 ಅಕ್ಟೋಬರ 2011ರ ವರೆಗೆ ಶಿವಪುರಿ ಅರಣ್ಯದಲ್ಲಿ ಸಂಪೂರ್ಣ ಚಾರ್ತುಮಾಸ ತಪಸಾಧನೆ. 2013 ರಲ್ಲಿ ಮಹಾರಾಷ್ಟ್ರದಲ್ಲಿ ಚಾರ್ತುಮಾಸ ತಪಸಾಧನೆ. ಇಡೀ ದೇಶದಲ್ಲಿ ಜಂಗಲವಾಲೆ ಬಾಬಾ ಎಂಬ ಹೆಸರಿನಿಂದ ಜನಪ್ರೀಯವಾಗಿ ಸಾಮಾಜಿಕ ವೈಮನಸ್ಸು ಮತ್ತು ಮತಭೇದವನ್ನು ಹೊಡೆದೊಡಿಸಿ ಸಾಮಾಜಿಕ ಸಂಘಟನೆ ಮತ್ತು ಪರಸ್ಪರ ಸೌಹಾರ್ದಕ್ಕಾಗಿ ಕಾರ್ಯವನ್ನು ಮಾಡಿದ್ದಾರೆ.

18 ಅಕ್ಟೋಬರ್ ಶುಕ್ರವಾರ ಸಾಯಂಕಾಲ 6 ಗಂಟೆ ಸುಮಾರಿಗೆ ಜಂಗಲವಾಲೆ ಬಾಬಾ ಕಾಲರಾಗಿದ್ದು ಇನರ ದರ್ಶನಕ್ಕೆ ಸಾವಿರಾರು ಭಕ್ತ ಸಮೂಹ ಜುಗೂಳ ಗ್ರಾಮಕ್ಕೆ ಬಂದು ದರ್ಶನ ಪಡೆದರು. ಇವರ ಅಗ್ನಿ ಸ್ಪರ್ಶಕ್ಕೆ ಲಕ್ಷಾಂತರ ರೂಪಾಯಿ ಸವಾಲೂಗಳನ್ನು ಹಿಡಿದ ಬೆಂಕಿ ಸ್ಪರ್ಶ ಮಾಡಿದ ಭಕ್ತರು.

ಬೈಟ್ 1 :ಸ್ವಸ್ತಿ ಶ್ರೀ ಧರ್ಮ ಸೇನಾ ಭಟ್ಟಾರಕ - ವರೂರ (ಕನ್ನಡದಲ್ಲಿ ಮಾತನಾಡಿದ್ದಾರೆ)

ಬೈಟ್ 2 : ಉಮೇಶ ಪಾಟೀಲ - ಸ್ಥಳೀಯರು (ಜೂಗಳ) - ನೀಲಿ ಬಣ್ಣದ ಟೀ ಶರ್ಟ ಹಾಕಿಕೊಂಡಿದ್ದಾರೆ.

ಬೈಟ್ 3 : ವರ್ದಮಾನ ಲೆಂದಿ - ಸ್ಥಳೀಯರು (ಜೂಗಳ) - ಹಳದಿ ಟೀ ಶರ್ಟ ಹಾಕಿಕೊಂಡಿದ್ದಾರೆ.

ಈ ಜಂಗಲವಾಲೆ ಬಾಬಾ ಸ್ವಾಮೀಜಿಗಳ ದರ್ಶನಕ್ಕೆ ಭಾರತದ ಎಲ್ಲ ಕಡೆಯಿಂದ ಭಕ್ತರು ಬಂದಿದ್ದರಿಂದ ಒಂದು ಬೈಟ್ ಅನ್ನು ಹಿಂದಿಯಲ್ಲಿ ತೆಗೆದುಕೊಳ್ಳಲಾಗಿದೆ

ಬೈಟ್ 4 : ಸ್ವರಭಸೇನ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ - ರಾಜಸ್ಥಾನ (ತಿಜಾರಾ) (ಹಿಂದಿಯಲ್ಲಿ ಮಾತನಾಡಿದವರು)

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.