ETV Bharat / state

ಮಹಾಮಳೆ: ಜಾರಕಿಹೊಳಿ ಮನೆಯೂ ಜಲಾವೃತ... 24 ಗಂಟೆಯಿಂದ ಪ್ರವಾಹದಲ್ಲೇ ಸಿಲುಕಿರುವ ದಂಪತಿ! - ಶಾಸಕ ಬಾಲಚಂದ್ರ ಜಾರಕಿಹೊಳಿ

ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ನಗರದಲ್ಲಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆ ಸಹ ಜಲಾವೃತಗೊಂಡಿದೆ. ಇನ್ನು ಕಬಲಾಪುರ ಗ್ರಾಮದಲ್ಲಿ ದಂಪತಿ ಪ್ರವಾಹದ ಮಧ್ಯೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ
author img

By

Published : Aug 7, 2019, 11:17 AM IST

Updated : Aug 7, 2019, 11:28 AM IST

ಬೆಳಗಾವಿ: ಜಿಲ್ಲೆಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.

ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ನಗರದಲ್ಲಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆ ಸಹ ಜಲಾವೃತಗೊಂಡಿದೆ. ಜಿಲ್ಲೆಯ ಜನಸಾಮಾನ್ಯರೂ ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.

ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ

ನಗರದ ಶಾಲಾ-ಕಾಲೇಜುಗಳಿಗೂ ನೀರು ನುಗ್ಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಿಡಿಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 60 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಇದರಿಂದ ಗೋಕಾಕ ತಾಲೂಕಿನ ಕೊಣ್ಣೂರ, ಲೋಳಸೂರು ಗ್ರಾಮಗಳಿಗೆ ನೀರು ನುಗ್ಗಿದೆ. ಜನರು, ಸಾಮಾನು ಸರಂಜಾಮುಗಳ ಜತೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.

ಪ್ರವಾಹದ ಮಧ್ಯೆ ಸಿಲುಕಿದ ಗಂಡ-ಹೆಂಡತಿ:

ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದಲ್ಲಿ ದಂಪತಿ ಪ್ರವಾಹದ ಮಧ್ಯೆ ಸಿಲುಕಿದ್ದಾರೆ. ನಿನ್ನೆ ಬೆಳಗ್ಗೆ ತೋಟದ ಮನೆಗೆ ತೆರಳಿದ್ದ ವೇಳೆ ಪ್ರವಾಹ ಹೆಚ್ಚಾಗಿದೆ. ಬಳ್ಳಾರಿ ನಾಲಾದಿಂದ ಮನೆಯ ನಾಲ್ಕು ಭಾಗದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ರೈತ ಕಾಡಪ್ಪ ಹಾಗೂ ಆತನ ಪತ್ನಿ ರತ್ನವ್ವ ಪ್ರವಾಹದ ಮಧ್ಯೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆಹಾರ-ನೀರು ಇಲ್ಲದೆ ಹೆಲಿಕಾಪ್ಟರ್​​ ಮೂಲಕ ನಮ್ಮನ್ನು ರಕ್ಷಿಸಿ ಎಂದು ಕಳೆದ 24 ಗಂಟೆಗಳಿಂದ ಗೋಗರೆಯುತ್ತಿದ್ದಾರೆ.

Intro:ತುಂಬಿದ ಹಿಡಕಲ್ ಜಲಾಶಯ : ಶಾಸಕರ ಮನೆ ಜಲಾವೃತ : ಪ್ರವಾಹಕ್ಕೆ ನಲುಗಿದ ಗೋಕಾಕ್

ಬೆಳಗಾವಿ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಹದಗೆಟ್ಟಿದೆ. ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆಗೆ ನೀರು ನುಗ್ಗಿದ್ದು ಶಾಸಕರು ಪ್ರವಾಹ ಎದುರಿಸುವಂತಾಗಿದೆ.

ಹಿಡಕಲ್ ಜಲಾಶಯದಿಂದ ನೀರು ಬಳಸುತ್ತಿರುವ ಹಿನ್ನಲೆ ಗೋಕಾಕ್ ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ನಗರದಲ್ಲಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆ ಮುಳುಗಡೆಯಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಳಗಾವಿ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ.

Body:ಗೋಕಾಕ್ ಪಟ್ಟಣದಲ್ಲಿ ಭಾರಿ ಪ್ರವಾಹ ಮುಳುಗಿದ ಶಾಲಾ ಕಳೇಜುಗಳು : ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಗೋಕಾಕ್ ಪಟ್ಟಣ ಮುಳುಗಡೆಯಾಗಿದೆ. ನಗರದ ಶಾಲಾ ಕಾಲೇಜುಗಳಲ್ಲಿ ನೀರು ಹೊಕ್ಕಿದ್ದು ಜನಜೀವ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Conclusion:ಹಿಡಿಕಲ್ ಜಲಾಶಯ ಸಂಪೂರ್ಣ ಭರ್ತಿ ಹಿನ್ನಲೆ,
ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದ್ದು ಗೋಕಾಕ ತಾಲೂಕಿನ ಕೊಣ್ಣೂರ, ಲೋಳಸೂರು ಗ್ರಾಮಗಳಿಗೆ ನೀರು ನುಗ್ಗಿದೆ. ಜನರು ತಮ್ಮ ಸಾಮಗ್ರಿಗಳನ್ನು ಹೊತ್ತು ಬೇರೆ ಕಡೆ ಹೊರಡುತ್ತಿದ್ದು ಪರಿಸ್ಥಿತಿ ವಿಕೋಪ ತಲುಪಿದೆ.

ವಿನಾಯಕ ಮಠಪತಿ
ಬೆಳಗಾವಿ

Last Updated : Aug 7, 2019, 11:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.