ETV Bharat / state

ಕರ್ಫ್ಯೂಗೆ ಬೆಂಬಲ ನೀಡಿದ ಸಮಸ್ತ ಜನತೆಗೆ ಧನ್ಯವಾದ ತಿಳಿಸಿದ ಕೇಂದ್ರ ಸಚಿವ ಸುರೇಶ್​ ಅಂಗಡಿ

author img

By

Published : Mar 22, 2020, 6:38 PM IST

Updated : Mar 22, 2020, 6:47 PM IST

ಕೇಂದ್ರ ಸಚಿವ ಸುರೇಶ್​ ಅಂಗಡಿಯವರು ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಬೆಂಬಲಿಸಿ ಕುಟುಂಬದೊಂದಿಗೆ ಕಾಲ ಕಳೆದರು. ಹಾಗೆ ಕರ್ಫ್ಯೂಗೆ ಬೆಂಬಲ ನೀಡಿದ ಬೆಳಗಾವಿ ಸೇರಿದಂತೆ ದೇಶದ ಜನರಿಗೆ ಧನ್ಯವಾದ ತಿಳಿಸಿದರು.

Suresh Angadi
ಕರ್ಫ್ಯೂಗೆ ಬೆಂಬಲ ನೀಡಿದ ಸಮಸ್ತ ಜನರಿಗೆ ಧನ್ಯವಾದ: ಸುರೇಶ ಅಂಗಡಿ

ಬೆಳಗಾವಿ: ಕೇಂದ್ರ ಸಚಿವ ಸುರೇಶ್​ ಅಂಗಡಿಯವರು ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂಗೆ ಕರೆಗೆ ಬೆಂಬಲ ವ್ಯಕ್ತಪಡಿಸಿ ಕುಟುಂಬದೊಂದಿಗೆ ಕಾಲ ಕಳೆದರು.

ಕರ್ಫ್ಯೂಗೆ ಬೆಂಬಲ ನೀಡಿದ ಸಮಸ್ತ ಜನರಿಗೆ ಧನ್ಯವಾದ: ಸುರೇಶ್​ ಅಂಗಡಿ
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕರೆ ಮೇರೆಗೆ ದೆಹಲಿಯಿಂದ ಬಂದಿದ್ದೇನೆ. ಇಂದು ಮನೆಯಲ್ಲಿಯೇ ನನ್ನ ಪತ್ನಿಯ ಜೊತೆಗೆ ಕಾಲ ಕಳೆಯುತ್ತಿದ್ದೇನೆ. ಪ್ರಸ್ತುತ ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಮಾರಕವಾಗಿದೆ ಎಂದರೆ, ನಾವು ಚಿಕ್ಕವರಿದ್ದಾಗ ಏನಾದರೂ ತಪ್ಪು ಮಾಡಿದರೆ ಹಿರಿಯರು ನಮಗೆ ನಿನಗೆ ದುರ್ಗವ್ವನ ಬ್ಯಾನಿ ಬರಲಿ ಎಂದು ಬೈಯುತ್ತಿದ್ದರು. ಆದರೀಗ ಬರುವ ದಿನದಲ್ಲಿ ಕೊರೊನಾ ಬ್ಯಾನಿ ಬರಲಿ ಎಂಬ ಬೈಗುಳ ಬರಬಹುದು. ಅಷ್ಟರಮಟ್ಟಿಗೆ ಕೊರೊನಾ ಮಾರಕವಾಗಿದೆ ಎಂದರು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆ ಪ್ರಶಾಂತವಾಗಿದೆ. ದಿನಂಪ್ರತಿ ನಗರ ಟ್ರಾಫಿಕ್, ವಾಹನಗಳು ಹಾಗೂ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ಇಂದು ಶಾಂತ ವಾತಾವರಣವಿರುವುದರಿಂದ ಕೋಗಿಲೆ ಹಾಗೂ ಇತರ ಪಕ್ಷಿಗಳ ಕಲರವ ಕೇಳುವಂತಾಗಿದೆ ಎಂದರು. ಹಾಗೆ ಕರ್ಫ್ಯೂಗೆ ಬೆಂಬಲ ನೀಡಿದ ಬೆಳಗಾವಿ ಸೇರಿದಂತೆ ದೇಶದ ಜನರಿಗೆ ಸಚಿವರು ಧನ್ಯವಾದ ತಿಳಿಸಿದರು.

Last Updated : Mar 22, 2020, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.