ETV Bharat / state

ಸತೀಶ್‌ ಏಳು ವರ್ಷ ಆರಾಮಾಗಿ ಇರೋದು ಒಳ್ಳೆಯದು: ಸಚಿವ ರಮೇಶ್ ಜಾರಕಿಹೊಳಿ - ಆರ್​ಎಸ್​ಎಸ್​ ವಿವಾದ,

ಆರ್​ಎಸ್​ಎಸ್ ವಿಚಾರವಾಗಿ ಜಾರಕಿಹೊಳಿ‌ ಸಹೋದರರ ಮಧ್ಯೆ ಟಾಕ್ ವಾರ್ ಶುರುವಾಗಿದೆ. ಸತೀಶ್ ಜಾರಕಿಹೊಳಿ ಮಾತಿಗೆ ಸಚಿವ ರಮೇಶ್ ಫುಲ್​ ಗರಂ ಆಗಿದ್ದಾರೆ.

Talk war between Ramesh Jarkiholi and Satish Jarkiholi, Minister Ramesh Jarkiholi, Minister Ramesh Jarkiholi news, RSS matter, RSS issue news, ರಮೇಶ್​ ಜಾರಕಿಹೊಳಿ ಮತ್ತು ಸತೀಶ್​ ಜಾರಕಿಹೊಳಿ ಮಧ್ಯೆ ವಾಗ್ವಾದ, ಸಚಿವ ರಮೇಶ್​ ಜಾರಕಿಹೊಳಿ, ಸಚಿವ ರಮೇಶ್​ ಜಾರಕಿಹೊಳಿ ಸುದ್ದಿ, ಆರ್​ಎಸ್​ಎಸ್​ ವಿವಾದ, ಆರ್​ಎಸ್​ಎಸ್​ ವಿವಾದ ಸುದ್ದಿ,
ಸತೀಶ್ ಮಾತಿಗೆ ಸಚಿವ ರಮೇಶ್ ಗರಂ
author img

By

Published : Jan 15, 2021, 7:44 PM IST

Updated : Jan 15, 2021, 8:43 PM IST

ಬೆಳಗಾವಿ: ಆರ್​ಎಸ್​ಎಸ್​ ವಿಚಾರವಾಗಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಮಧ್ಯೆ ಮಾತಿನ ಚಕಮಕಿ ತೀವ್ರಗೊಂಡಿದೆ.

ಸತೀಶ್ ಮಾತಿಗೆ ಸಚಿವ ರಮೇಶ್ ಗರಂ

ಆರ್‌ಎಸ್‌ಎಸ್​ಗೂ ನಮ್ಮ ಕುಟುಂಬಕ್ಕೂ ಸಂಬಂಧವೇ ಇಲ್ಲ ಎಂದು ಸತೀಶ್ ಜಾರಕಿಹೊಳಿ‌ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್, ಸತೀಶ್ ಜಾರಕಿಹೊಳಿ‌ ಹೇಳಿಕೆ ಕೇಳಿ ನಗು ಬರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಮಾತನಾಡುವುದು ವಿಚಿತ್ರ ಅನಿಸುತ್ತದೆ. ನಮ್ಮ ತಂದೆ ಲಕ್ಷ್ಮಣ್ ಜಾರಕಿಹೊಳಿ‌ ಸಂಘದಲ್ಲಿ ಇದ್ದರೋ, ಇಲ್ಲವೋ ಎಂಬುವುದನ್ನು ನೀವೆ ಸರ್ವೇ ಮಾಡಿ ಎಂದು ಸಚಿವರು ಹೇಳಿದರು.

ಜಗನ್ನಾಥ್ ಜೋಶಿ ನೇತೃತ್ವದಲ್ಲಿ ಗೋವಾ ವಿಮೋಚನೆ ಚಳವಳಿ ಆರಂಭವಾಗಿತ್ತು. ಅದು ಸಂಘ ಪರಿವಾರ ಹೌದೋ ಅಲ್ವೋ?. ನಾನು ಜನಸಂಘ ಮೂಲದಿಂದ ಬಂದಿದ್ದು ನಿಜ. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಜಾತ್ಯಾತೀತನಾಗಿದ್ದು ನಿಜ. ಅಜ್ಮೀರ ದರ್ಗಾಗೆ ಹೋಗಿ ಟೋಪಿ ಹಾಕಿದ್ದು ನಿಜ. ಅದನ್ನು ಡಿನೈ ಮಾಡ್ತಿಲ್ಲ ಎಂದರು.

ಮುಸ್ಲಿಂ ಕಾರ್ಯಕ್ರಮಕ್ಕೆ ಹೋದರೆ ಟೋಪಿ ಹಾಕಿ ಅತ್ತರ್ ಹಚ್ತಾರೆ. ಹಿಂದೂ ಕಾರ್ಯಕ್ರಮಕ್ಕೆ ಹೋದರೆ ಪಟಗೆ ಸುತ್ತುತ್ತಾರೆ. ಅದರಲ್ಲಿ ನೀವು ರಾಜಕಾರಣ ಮಾಡಿದ್ರೆ ನಿಮ್ಮಂತ ಮೂರ್ಖರಿಲ್ಲ. ಈಗಲೂ ನಾವು ಮುಸಲ್ಮಾನ, ಎಸ್‌ಸಿ, ಹಿಂದುಳಿದವರ ಪರವಾಗಿದ್ದೇನೆ. ಆದರೆ ಪಾಕಿಸ್ತಾನ ಜಿಂದಾಬಾದ್ ಅನ್ನೋ ದೇಶದ್ರೋಹಿ ಪರವಾಗಿಲ್ಲ. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಗಡಿಪಾರು ಮಾಡಬೇಕೆಂಬುದು ನಮ್ಮ ನಿಲುವಷ್ಟೇ ಎಂದರು.

ರಮೇಶ್ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂಬ ಸತೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ‌ ಬಾಲ್ಯ ಜೀವನ ನಿಮಗೆ ಗೊತ್ತಿಲ್ಲ. ಕಾಲೇಜು ಎಲೆಕ್ಷನ್ ವೇಳೆ ನಾನು ಬೋರ್ಡ್ ಬರೆಯಲು ಕಲಿಸುತ್ತಿದ್ದೆ. ಅಬ್ದುಲ್ ದೇಸಾಯಿ ಅಂತ ಸ್ನೇಹಿತ ಇದ್ದಾನೆ. ಅವನನ್ನೇ ಕೇಳಿ. ಸತೀಶ್ ಜಾರಕಿಹೊಳಿ‌ ಏನು ದೊಡ್ಡ ಲೀಡರಾ?. ಸತೀಶ್ ಜಾರಕಿಹೊಳಿ‌ ಹತಾಶರಾಗಿದ್ದಾರೆ. ಆತನ ಲೀಡರ್‌ಶಿಪ್ ಕೊಲ್ಯಾಪ್ಸ್ ಆಗುತ್ತಿದೆ. ಸತೀಶ್ ಜಾರಕಿಹೊಳಿ‌ ಏಳು ವರ್ಷ ಅರಾಮ ಇರುವುದು ಒಳ್ಳೆಯದು. ಈಗ ಎರಡು ವರ್ಷ, ಮುಂದಿನ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಇಲ್ಲ. ಆತ ಸಿಎಂ ಅಲ್ಲ, ಎಲ್ಲದರಲ್ಲೂ ಮಾಜಿ ಆಗ್ತಾನೆ ಎಂದರು.

ಯಮಕನಮರಡಿಯಲ್ಲಿ ಎಂಎಲ್‌ಎ ಆಗಿ ಆರಿಸಿ ಬರಲಿ ಮೊದಲು. ಜಾರಕಿಹೊಳಿ‌ ಕುಟುಂಬದಲ್ಲಿ ದೊಡ್ಡವನಾಗಿ ನಾನು ಸುಮ್ಮನಿದ್ದೇನೆ. ಅವನು ಎಷ್ಟು ಹತಾಶರಾಗಿ ಮಾತನಾಡಿದರೂ ಉತ್ತರ ಕೊಟ್ಟಿಲ್ಲ. ಆತ ನಿಜವಾಗಿಯೂ‌ ಮನುಷ್ಯ ಆಗಿದ್ರೆ ವೈಯಕ್ತಿಕವಾಗಿ ಕೇಳಿ ಅನ್ನಬೇಕಿತ್ತು. ಸತೀಶ್ ಜಾರಕಿಹೊಳಿ‌ ಎಲ್ಲ ಹಂತದಲ್ಲಿ ಫೇಲ್ ಆಗಿದ್ದಾನೆ. ಅದಕ್ಕೆ ಹತಾಶರಾಗಿ ಮಾತನಾಡುತ್ತಿದ್ದಾನೆ. ಸತೀಶ್ ಜಾರಕಿಹೊಳಿ‌ ಆರ್ಟಿಫಿಶಿಯಲ್ ರಾಜಕಾರಣಿ. ಮೊದಲ ಬಾರಿ ದೆಹಲಿಗೆ ಬಿ. ಶಂಕರಾನಂದ ಮನೆಗೆ ಹೋಗಿ ಬಂದ ಮೇಲೆ ಗನ್‌ಮ್ಯಾನ್ ಇಟ್ಟುಕೊಂಡಿದ್ದ. ಆತ ಆಗ ಸಾಮಾನ್ಯ ಮನುಷ್ಯನಾಗಿದ್ದ. ಅವನು ಆರ್ಟಿಫಿಷಿಯಲ್ ರಾಜಕಾರಣಿ. ಅವನ ಬಗ್ಗೆ ಮಾತನಾಡಬೇಡಿ ಎಂದು ಸಚಿವ ಜಾರಕಿಹೊಳಿ‌ ಗರಂ ಆದರು.

Last Updated : Jan 15, 2021, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.