ETV Bharat / state

ಸ್ವಚ್ಛ ಭಾರತ ಮಿಷನ್​ ಅನುಷ್ಠಾನ ವಿಫಲ: ಅಸಹಾಯಕವಾದ ಬೆಳಗಾವಿ ಜಿಲ್ಲಾಡಳಿತ! - ಸ್ವಚ್ಛಭಾರತ ಮಿಷನ್​ ವಿಫಲ

ಕುಂದಾನಗರಿ ಬೆಳಗಾವಿಗೆ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಕೂಡಾ ಭಾಗವಹಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮೆರಗು ತಂದುಕೊಟ್ಟಿದ್ದರು. ಅವರ ಕನಸಿನ ಸ್ವಚ್ಛ ಭಾರತ ಯೋಜನೆ ಅನುಷ್ಠಾನ ಈ ಜಿಲ್ಲೆಯಲ್ಲಿ ಸಾಧ್ಯವಾಗುತ್ತಿಲ್ಲ.

swachh bharat mission failed
ಸ್ವಚ್ಛ ಭಾರತ ಮಿಷನ್​ ವಿಫಲ
author img

By

Published : Jun 30, 2020, 4:33 PM IST

ಬೆಳಗಾವಿ: 1924ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿತ್ತು ಎಂಬುವುದು ವಿಶೇಷ. ವಿಪರ್ಯಾಸವೆಂದರೆ ಗಾಂಧೀಜಿ ಒಂದು ವಾರ ತಂಗಿದ್ದ ಬೆಳಗಾವಿಯಲ್ಲಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಸ್ವಚ್ಛ ಭಾರತ ಮಿಷನ್​ ವಿಫಲ

ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್ ಜಾರಿಗೊಳಿಸಿತ್ತು. ಗಾಂಧೀಜಿ ಜೊತೆಗೆ ನಂಟು ಹೊಂದಿರುವ ‌ಬೆಳಗಾವಿ ಸ್ವಚ್ಛ ಭಾರತ ಯೋಜನೆ ಜಾರಿಯಲ್ಲಿ ಹಿಂದೆ ಬಿದ್ದಿದೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಈ ಕಾರಣಕ್ಕೆ ಬೆಳಗಾವಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕುಂದಾನಗರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಮರ್ಪಕ ಸಾರ್ವಜನಿಕ ಶೌಚ ಗೃಹಗಳಿಲ್ಲ. ಅಲ್ಲೊಂದು, ಇಲ್ಲೊಂದು ಎಂಬತಿರುವ ಶೌಚ ಗೃಹಗಳು ಕೂಡ ಬಳಕೆಗೆ ಬಾರದಂತಿವೆ.

ಗಾಂಜಾ ಸೇವನೆ ಕೇಂದ್ರಗಳಾಗಿವೆ ಪಬ್ಲಿಕ್ ಟಾಯ್ಲೆಟ್

ಆರು ಲಕ್ಷ ಜನಸಂಖ್ಯೆ ‌ಹೊಂದಿರುವ ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ 15 ಸಾರ್ವಜನಿಕ ಶೌಚ ಗೃಹ‌ ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ ಬಹುತೇಕ ಶೌಚ ಗೃಹಗಳು ದುರಸ್ತಿ ಹಂತದಲ್ಲಿವೆ. ಅನೇಕ ಸಮುದಾಯ ಶೌಚ ಗೃಹಗಳ ಬಾಗಿಲು ಮುರಿದ ಸ್ಥಿತಿಯಲ್ಲಿದ್ರೆ, ನೀರಿನ ಸೌಲಭ್ಯಗಳೂ ಇಲ್ಲ. ಈ ಕಾರಣಕ್ಕೆ ಯುವಕರು ಶೌಚ ಗೃಹಗಳನ್ನು ಗಾಂಜಾ ಸೇವಿಸಲು, ಅನೈತಿಕ ‌ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರೋಟರಿ ಕ್ಲಬ್ ನಡೆಸುವ ಫೇಡ್ ಶೌಚ ಗೃಹಗಳಲ್ಲಿ ಮಾತ್ರ ಶುಚಿತ್ವ ಇದ್ದು, ಪಾಲಿಕೆಯ ಉಚಿತ ಸಮುದಾಯ ಶೌಚ ಗೃಹಗಳ ಸ್ಥಿತಿ ಶೋಚನೀಯವಾಗಿದೆ.

ಸ್ವಚ್ಛ ಭಾರತ ಮಿಷನ್​ ನಿಯಮ ಉಲ್ಲಂಘನೆ

ಕೇಂದ್ರ ಸರ್ಕಾರದ ‌ಸ್ವಚ್ಛ ಭಾರತ ಮಿಷನ್ ನಿಯಮಗಳು ಮಹಾನಗರದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಈ ನಿಯಮದಂತೆ ಪ್ರತಿ ಕಿಲೋ ಮೀಟರ್​​ಗೊಂದರಂತೆ ಸಾರ್ವಜನಿಕ ಶೌಚ ಗೃಹಗಳಿರಬೇಕು. ಸ್ವಚ್ಛ ಭಾರತ ಮಿಷನ್ ಅಡಿ ಪಾಲಿಕೆಗೆ ಕೋಟ್ಯಂತರ ಹಣ ಹರಿದು ಬರುತ್ತಿದ್ದರೂ ನಿಯಮಗಳು ಜಾರಿಯಾಗದೇ ಉಲ್ಲಂಘನೆ ಆಗುತ್ತಿವೆ. ಅತಿ ಹೆಚ್ಚು ಜನ ಓಡಾಡುವ ಹಾಗೂ ವಾಣಿಜ್ಯ ಪ್ರದೇಶಗಳಾದ ಖಡೇಬಜಾರ್, ಮಾರುತಿಗಲ್ಲಿ, ಗಣಪತಿಗಲ್ಲಿ, ಸಮಾದೇವಿಗಲ್ಲಿ, ಕಿರ್ಲೋಸ್ಕರ್ ರಸ್ತೆಯಲ್ಲಿ ಒಂದೂ ಸಮುದಾಯ ಶೌಚ ಗೃಹಗಳಿಲ್ಲ.

ಶಾಪಿಂಗ್ ಮಾಡಲು ದೂರದ ಹಳ್ಳಿ, ಪಟ್ಟಣಗಳಿಂದ ಬೆಳಗಾವಿಗೆ ಬರುವ ಅನೇಕ ಜನರು ಶೌಚ ಗೃಹವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ. ಮಹಿಳೆಯರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಶೌಚ ಗೃಹಕ್ಕೆ ಹೋಟೆಲ್​ಗೆ ಹೋಗಬೇಕಾದ ಅನಿವಾರ್ಯತೆ ಇದೆ. ಸ್ಮಾರ್ಟ್ ಸಿಟಿ, ಅಮೃತ ಸಿಟಿಯಂತಹ ಯೋಜನೆ ವ್ಯಾಪ್ತಿಗೆ ಬೆಳಗಾವಿ ಒಳಪಟ್ಟಿದೆ. ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 250 ಕೋಟಿ ಹಣ ನಗರಕ್ಕೆ ಹರಿದು ಬರುತ್ತದೆ.

ನಗರೋತ್ಥಾನ ಯೋಜನೆಯಡಿ ಪ್ರತಿ ವರ್ಷ ರಾಜ್ಯ ಸರ್ಕಾರ 100 ಕೋಟಿ ಹಣವನ್ನು ಪಾಲಿಕೆಗೆ ಬಿಡುಗಡೆ ಮಾಡುತ್ತದೆ. ಆದ್ರೆ ಕುಂದಾನಗರಿಗೆ ಬರುವ ಪ್ರವಾಸಿಗರಿಗೆ ಒಂದೂ ಅಚ್ಚುಕಟ್ಟಾದ, ಸ್ವಚ್ಛವಾದ ಸಮುದಾಯ ಶೌಚ ಗೃಹಗಳ ನಿರ್ಮಾಣವಾಗಿಲ್ಲ ಎಂಬುವುದು ಬೇಸರದ ಸಂಗತಿ. ವಾಣಿಜ್ಯ ಪ್ರದೇಶದಲ್ಲಿ ಶೌಚ ಗೃಹ ನಿರ್ಮಾಣಕ್ಕೆ ಯಾರೂ ಜಾಗ ನೀಡುತ್ತಿಲ್ಲ. ಈ ಕಾರಣಕ್ಕೆ ಸ್ವಚ್ಛ ಭಾರತ ಮಿಷನ್ ನಿಯಮಗಳಂತೆ ಶೌಚ ಗೃಹ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳೂ ಅಸಹಾಯಕರಾಗುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.