ETV Bharat / state

ಸಾರಿಗೆ ಸಚಿವರ ತವರಲ್ಲಿ ಬಸ್​​ಗೆ ಕಲ್ಲೆಸೆತ: ಚಾಲಕನಿಗೆ ಗಾಯ

ಜಮಖಂಡಿ ತಾಲೂಕಿನಿಂದ ಅಥಣಿಗೆ ಬರುವ ಸಂದರ್ಭದಲ್ಲಿ ಸವದಿ ಕ್ರಾಸ್ ಬಳಿ ಕಿಡಿಗೇಡಿಗಳು ಬಸ್​​ನ ಮುಂಭಾಗಕ್ಕೆ ಕಲ್ಲು ಎಸೆದಿದ್ದಾರೆ. ಇದರ ಪರಿಣಾಮವಾಗಿ ಗಾಜು ಪುಡಿ ಪುಡಿಯಾಗಿ ಚಾಲಕನ ಕೈಗೆ ತಾಗಿ ಪೆಟ್ಟಾಗಿದೆ.

Ksrtc
Ksrtc
author img

By

Published : Apr 14, 2021, 8:56 PM IST

ಅಥಣಿ: ಸಾರಿಗೆ ನೌಕರರು ವಿವಿಧ ಬೇಡಿಕೆ ಹಾಗೂ 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಇವತ್ತಿಗೆ 8ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರೂರಲ್ಲಿ ಕೆಲವು ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಇದನ್ನು ಕಿಡಿಗೇಡಿಗಳು ಸಹಿಸದೆ ಬಸ್​ಗೆ ಕಲ್ಲೆಸೆದಿದ್ದಾರೆ. ಆದರೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಥಣಿ ಜಮಖಂಡಿ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿತ್ತು. ಜಮಖಂಡಿ ತಾಲೂಕಿನಿಂದ ಅಥಣಿಗೆ ಬರುವ ಸಂದರ್ಭದಲ್ಲಿ ಸವದಿ ಕ್ರಾಸ್ ಬಳಿ ಕಿಡಿಗೇಡಿಗಳು ಬಸ್​ನ ಮುಂಭಾಗಕ್ಕೆ ಕಲ್ಲು ಎಸೆದಿದ್ದಾರೆ. ಇದರ ಪರಿಣಾಮವಾಗಿ ಗಾಜು ಪುಡಿ ಪುಡಿಯಾಗಿ ಚಾಲಕನ ಕೈಗೆ ತಾಗಿ ಪೆಟ್ಟಾಗಿದೆ.

ವಿಜಯಕುಮಾರ ಜೇರೆ ಎಂಬ ಚಾಲಕರಿಗೆ ಪೆಟ್ಟಾಗಿದ್ದು, ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಚಾಲಕರು ಸಾರ್ವಜನಿಕರ ತೊಂದರೆ ನೋಡದೆ ಬಸ್ ಸಂಚಾರ ಪ್ರಾರಂಭಿಸಿದರೆ ಕೆಲವು ಕಿಡಿಗೇಡಿಗಳಿಂದ ಕೆಲ ಚಾಲಕರು ಜೀವಭಯದಲ್ಲಿ ಬಸ್ ಓಡಿಸಬೇಕಿದೆ.

ಸ್ಥಳೀಯ ಪೊಲೀಸ್ ಇಲಾಖೆ ನಮಗೆ ಭದ್ರತೆ ನೀಡಬೇಕೆಂದು ಕೆಲವು ಚಾಲಕರು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ. ಅಥಣಿ ಕೆಎಸ್ಆರ್​ಟಿಸಿ ಘಟಕದ ಬಸ್​ಗೆ ಕಲ್ಲು ತೂರಾಟ ಮಾಡಿದ ಎರಡನೇ ಪ್ರಕರಣ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.