ETV Bharat / state

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​ಗೆ ಕಲ್ಲು ತೂರಾಟ; ಬಸ್​ ಸಂಚಾರ ಸ್ಥಗಿತ

author img

By

Published : Nov 26, 2022, 11:28 AM IST

ಮಹಾರಾಷ್ಟ್ರದ ಮೀರಜ್ ಕಾಗವಾಡ‌ ಮಧ್ಯೆ ಸಂಚರಿಸುತ್ತಿದ್ದ ಕರ್ನಾಟಕದ ಬಸ್​ಗೆ ನಿನ್ನೆ ಮಧ್ಯರಾತ್ರಿ ಕಲ್ಲು ತೂರಾಟ ನಡೆಸಲಾಗಿದೆ.

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​ಗೆ ಕಲ್ಲು ತೂರಾಟ; ಬಸ್​ ಸಂಚಾರ ಸ್ಥಗಿತ
karnataka-bus-stone-pelted-in-maharashtra-bus-service-stopped

ಬೆಳಗಾವಿ: ನಿನ್ನೆ ಕರ್ನಾಟಕ ಬಸ್​ಗೆ ಮಸಿ ಬಳಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ರಾಜ್ಯದ ಬಸ್​ ಮೇಲೆ ಕಲ್ಲು ತೂರಾಟ ನಡೆಸಿ, ಉದ್ಧತಟನ ಪ್ರದರ್ಶಿಸಿದ್ದಾರೆ. ಈ ಬೆನ್ನಲ್ಲೇ ಮೀರಜ್​ ಮಾರ್ಗವಾಗಿ ಸಂಚರಿಸುವ ರಾಜ್ಯದ ಬಸ್​ ಸಂಚಾರ ಸ್ಥಗಿತಕ್ಕೆ ಬೆಳಗಾವಿ ಪೊಲೀಸರು ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದ ಮೀರಜ್ ಕಾಗವಾಡ‌ ಮಧ್ಯೆ ಸಂಚರಿಸುತ್ತಿದ್ದ ಕರ್ನಾಟಕದ ಬಸ್​ಗೆ ನಿನ್ನೆ ಮಧ್ಯರಾತ್ರಿ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ಅಥಣಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ವೇಳೆ ಬಸ್​​ನ ಗಾಜು ಜಖಂಗೊಂಡಿದೆ.

ಮುನ್ನೆಚ್ಚರಿಕ ಕ್ರಮವಾಗಿ ರಾಜ್ಯದ ಬಸ್ ಸಂಚಾರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಕಾಗವಾಡ ಗಡಿ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಬಸ್​ಗೆ ಕಪ್ಪು‌ ಮಸಿ‌ ಬಳಿದು ಕನ್ನಡಿಗರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.