ETV Bharat / state

ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ - Solar eclipse news

ಬೆಳಗಾವಿಯ ಶಾಹಪುರದಲ್ಲಿರುವ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ಗ್ರಹಣ ಆರಂಭಕ್ಕೂ ಮುನ್ನ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ
ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ
author img

By

Published : Jun 21, 2020, 11:42 AM IST

ಬೆಳಗಾವಿ: ಇಂದು ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮಗಳನ್ನು ಶಿವಲಿಂಗ ಮೂರ್ತಿಗೆ ಸಲ್ಲಿಸಲಾಗುತ್ತಿದೆ.

ನಗರದ ಶಾಹಪುರದಲ್ಲಿರುವ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ‌ ಗ್ರಹಣ ಆರಂಭಕ್ಕೂ ಮುನ್ನ ಶಿವಲಿಂಗವನ್ನು ಶುಚಿಗೊಳಿಸಿ ವಿಶೇಷ ಪೂಜೆ, ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಲಾಯಿತು.

ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಗ್ರಹಣ ದೋಷವಾಗದಂತೆ ದೇವರ ಮೂರ್ತಿಗೆ ಬಿಲ್ವ ಪತ್ರೆಗಳಿಂದಲೇ ಶಿವಲಿಂಗ ಮೂರ್ತಿ ಹಾಗೂ ದೇವಸ್ಥಾನ ಆವರಣದಲ್ಲಿರುವ ಎಲ್ಲ ಮೂರ್ತಿಗಳನ್ನು ಶುಚಿಗೊಳಿಸಿ ಬಟ್ಟೆ ಸುತ್ತಲಾಗಿದೆ. ಮಧ್ಯಾಹ್ನದ ಬಳಿಕ ಮತ್ತೆ ದೇವಸ್ಥಾನ ಶುಚಿಗೊಳಿಸಿ ರುದ್ರಾಭಿಷೇಕ ಮಾಡಲಾಗುವುದು ಎಂದು ಕಪಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇಂದು ಬೆಳಗಾವಿಯಲ್ಲಿ ಶೇಕಡ 49.12ರಷ್ಟು ಗ್ರಹಣ ಗೋಚರವಾಗಲಿದ್ದು, ಗ್ರಹಣ ಸ್ಪರ್ಶ ಕಾಲ ಬೆಳಗ್ಗೆ 10 ಗಂಟೆ 03 ನಿಮಿಷಕ್ಕೆ ಆರಂಭವಾಗಿದ್ದು ಗ್ರಹಣ ಮಧ್ಯ ಕಾಲ - 11 ಗಂಟೆ 39 ನಿಮಿಷಕ್ಕೆ ಹಾಗೂ ಗ್ರಹಣ ಮೋಕ್ಷ ಕಾಲ 1 ಗಂಟೆ 27 ನಿಮಿಷ ಮುಗಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.