ಬೆಳಗಾವಿ : ಪರಸ್ಪರ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿನಿಮಯ ಮಾಡಿಕೊಳ್ಳುವ ಮೂಲಕ ನವಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಈ ಅಪರೂಪದ ಘಟನೆ ಜರುಗಿದೆ. ಗಿರೀಶ್ ಹಾಗೂ ಜ್ಯೋತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ . ಈ ಸರಳ ವಿವಾಹಕ್ಕೆ ಅವರೊಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಸಾಕ್ಷಿ ಆಯಿತು.
ಭಾನುವಾರ ಲಾಕ್ ಡೌನ್ ಮಧ್ಯೆ ನವಜೋಡಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ನವಜೋಡಿಗಳು ಮೊದಲು ಕೈಗೆ ಪರಸ್ವರ ಸ್ಯಾನಿಟೈಜರ್ ಹಚ್ಚಿಕೊಂಡರು. ಬಳಿಕ ಒಬ್ಬರಿಗೊಬ್ಬರು ಮಾಸ್ಕ್ ತೊಡಿಸಿ ಜಾಗೃತಿ ಮೂಡಿಸಿದರು.