ETV Bharat / state

ಪ್ರವಾಸಿ ಮಂದಿರಕ್ಕೆ ಸಚಿವ​ ಜಾರಕಿಹೊಳಿ‌ ಆಗಮನ: ಸಾಮಾಜಿಕ ಅಂತರಕ್ಕೆ ಬೆಂಬಲಿಗರ ತಿಲಾಂಜಲಿ

ದೇಶದೆಲ್ಲೆಡೆ ಲಾಕ್​ಡೌನ್​​ ನಿಯಮ ಉಲ್ಲಂಘಿಸುತ್ತಿರುವ ಸುದ್ದಿಗಳು ಬಿತ್ತರವಾಗುತ್ತಿರುವ ನಡುವೆಯೇ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಮೊದಲ ಬಾರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಬರಮಾಡಿಕೊಳ್ಳಲು ಮುಂದಾದ ಕಾರ್ಯಕರ್ತರು ಸಾಮಾಜಿಕ ಅಂತರ ಗಾಳಿಗೆ ತೂರಿದ್ದಾರೆ.

social distance violation by Ramesh jarakiholi  followers at Belgavi
ಮಹನೀಯರ ಪುತ್ಥಳಿಗೆ ಸಚಿವರ ಮಾಲಾರ್ಪಣೆ
author img

By

Published : Jun 5, 2020, 2:09 PM IST

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಜಿಲ್ಲೆಯ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದು, ಈ ವೇಳೆ, ಸ್ವಾಗತಿಸಲು ಮುಂದಾದ ಕಾರ್ಯಕರ್ತರು, ಬೆಂಬಲಿಗರು ಸಾಮಾಜಿಕ ಅಂತರ ಮರೆತು ಮುಗಿಬಿದ್ದಿದ್ದು, ಇದನ್ನು ಕಂಡೂ ಕಾಣದಂತೆ ಪೊಲೀಸರು ಸುಮ್ಮನಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಸಿ ಮಂದಿರಕ್ಕೆ ಸಚಿವ ರಮೇಶ್​ ಜಾರಕಿಹೊಳಿ ಭೇಟಿ
ಮಹನೀಯರ ಪುತ್ಥಳಿಗೆ ಸಚಿವರ ಮಾಲಾರ್ಪಣೆ: ಗೋಕಾಕ್​ನಿಂದ ನೇರವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಸಚಿವರು, ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದಾದ ಬಳಿಕ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜಿ ಹಾಗೂ ಬಸವೇಶ್ವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.