ETV Bharat / state

ಕುಂಭದ್ರೋಣ ಮಳೆಗೆ ಉತ್ತರ ತತ್ತರ: ಸಿದ್ದರಾಮಯ್ಯ ಬಾಗಲಕೋಟೆ, ಸಚಿವ ಅಶೋಕ್​ ಬೆಳಗಾವಿ ಪ್ರವಾಸ

author img

By

Published : Oct 19, 2020, 8:23 AM IST

ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ವಿಪಕ್ಷ ನಾಯಕ‌ ಸಿದ್ದರಾಮಯ್ಯ ‌ಹಾಗೂ ಸಚಿವ ಆರ್.ಅಶೋಕ್​​ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರು ವಿಮಾನ ‌ನಿಲ್ದಾಣದಿಂದ ಇಂದು‌ ಬೆಳಗ್ಗೆ 8.30‌ಕ್ಕೆ ಹೊರಡಲಿರುವ ಉಭಯ ನಾಯಕರು ಸಾಂಬ್ರಾ ‌ವಿಮಾನ ನಿಲ್ದಾಣಕ್ಕೆ ‌ಆಗಮಿಸಲಿದ್ದಾರೆ.

Belgavi
ಸಿದ್ದರಾಮಯ್ಯ ಬಾಗಲಕೋಟೆ, ಸಚಿವ ಅಶೋಕ ಬೆಳಗಾವಿ ಪ್ರವಾಸ

ಬೆಳಗಾವಿ: ಕುಂಭದ್ರೋಣ ಮಳೆಯಿಂದ ಉತ್ತರ ಕರ್ನಾಟಕ ತತ್ತರಿಸಿದ್ದು, ಹಾನಿಗೀಡಾದ ಪ್ರದೇಶಗಳಿಗೆ ವಿಪಕ್ಷ ನಾಯಕ‌ ಸಿದ್ದರಾಮಯ್ಯ ‌ಹಾಗೂ ಸಚಿವ ಆರ್.ಅಶೋಕ್​​ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಂಗಳೂರು ವಿಮಾನ ‌ನಿಲ್ದಾಣದಿಂದ ಇಂದು‌ ಬೆಳಗ್ಗೆ 8.30‌ಕ್ಕೆ ಹೊರಡಲಿರುವ ಉಭಯ ನಾಯಕರು ಸಾಂಬ್ರಾ ‌ವಿಮಾನ ನಿಲ್ದಾಣಕ್ಕೆ ‌ಆಗಮಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ರಸ್ತೆ ಮಾರ್ಗವಾಗಿ ಯರಗಟ್ಟಿ, ರಾಮದುರ್ಗ ‌ಮೂಲಕ ಬಾದಾಮಿ ತಲುಪಲಿದ್ದಾರೆ. ಅಲ್ಲಿನ‌ ತಾಲೂಕು ಕೆಡಿಪಿ‌ ಸಭೆ ನಡೆಸಿ ಬಳಿಕ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ. ಇಂದು ಮತ್ತು ನಾಳೆ ಸಿದ್ದರಾಮಯ್ಯ ‌ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇಂದು ಬೆಳಗ್ಗೆ‌ 9.30ಕ್ಕೆ ಬೆಳಗಾವಿಗೆ ಆಗಮಿಸುವ ಕಂದಾಯ ಸಚಿವ ಆರ್.ಅಶೋಕ್ ಅರ್ಧ ಗಂಟೆ ಪ್ರವಾಸಿ ಮಂದಿರದಲ್ಲಿ ಅತಿವೃಷ್ಟಿ ಸಂಬಂಧ ‌ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಬಳಿಕ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಮಳೆಯಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲಿದ್ದಾರೆ. ಇಂದು ಮಧ್ಯಾಹ್ನ 1.20ಕ್ಕೆ ಹುಕ್ಕೇರಿ ಪಟ್ಟಣ, 1.40ಕ್ಕೆ ಎಲಿಮುನ್ನೋಳಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ 3.10 ಗಂಟೆಗೆ ಕಲ್ಲೋಳ ಸೇತುವೆ, 3.30 ಗಂಟೆಗೆ ಯಡೂರ, ಯಡೂರವಾಡಿ ಹಾಗೂ 4.10 ಗಂಟೆಗೆ ಇಂಗಳಿ ಗ್ರಾಮದಲ್ಲಿ ಬೆಳೆಹಾನಿ ಪರಿಶೀಲಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.