ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಡಾ. ಹಿತಾ ಅವರ ವಿವಾಹ ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಅದ್ದೂರಿಯಾಗಿ ನೆರವೇರಿತು.
ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಸಂಗಮೇಶ್ವರ ಸಹೋದರ ಶಿವಕುಮಾರ್ ಪುತ್ರಿ ಡಾ. ಹಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಪಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಯು ಟಿ ಖಾದರ್, ಶಾಸಕ ಅಜಯ್ ಸಿಂಗ್, ಮಾಜಿ ಶಾಸಕ ಅಶೋಕ್ ಪಟ್ಟಣ್ ಪಾಲ್ಗೊಂಡು ನವ ವಧು-ವರರಿಗೆ ಆಶೀರ್ವದಿಸಿದರು.
![Lakshmi Hebbalkar Son marriage](https://etvbharatimages.akamaized.net/etvbharat/prod-images/9682452_thumjpg.jpg)
ವಿನಯ್ ಗುರೂಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮೂರು ದಿನಗಳ ಕಾಲ ಲೀಲಾ ಪ್ಯಾಲೇಸ್ನಲ್ಲಿ ವೈಭವದ ಮದುವೆ ಸಮಾರಂಭ ನೆರವೇರಿತು. ಮೊದಲನೇ ದಿನ ಮೆಹಂದಿ, ಎರಡನೇ ದಿನ ಹಳದಿ ಇಂದು ಮದುವೆ ಸಮಾರಂಭ ನಡೆಯಿತು.
![Lakshmi Hebbalkar Son marriage](https://etvbharatimages.akamaized.net/etvbharat/prod-images/kn-bgm-04-27-hebbalkar-son-marriage-7201786_27112020141800_2711f_1606466880_281.jpg)