ಚಿಕ್ಕೋಡಿ: ಕಾಗವಾಡ ಕ್ಷೇತ್ರದ ಅನರ್ಹಗೊಂಡ ಶಾಸಕ ಶ್ರೀಮಂತ ಪಾಟೀಲ ದರೂರ ಗ್ರಾಮದಲ್ಲಿ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ದರೂರ ಗ್ರಾಮದಲ್ಲಿ ಪರಿಹಾರ ವಿತರಣೆ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಕಾಣಿಸಲಿಲ್ಲ.
ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಜೊತೆಗೆ ಮುನಿಸಿಕೊಂಡಿದ್ದ ಶಾಸಕ ಉಮೇಶ ಕತ್ತಿ ಗೈರಾಗಿದ್ದು, ಅಥಣಿಯ ಪಕ್ಕದ ಕ್ಷೇತ್ರ ಕಾಗವಾಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸೋಲು ಕಂಡ ರಾಜು ಕಾಗೆ ಸಿಎಂ ಭೇಟಿಗೆ ಉತ್ಸಾಹ ತೋರಿಲ್ಲ.
ಆದ್ರೆ ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಯಡಿಯೂರಪ್ಪನವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹುಬ್ಬೇರಿಸುವಂತೆ ಮಾಡಿದೆ.