ETV Bharat / state

ಡೀಸೆಲ್ ಹಾಕಿಸಿದ್ದು ಕಾರು ಚಾಲಕ, ಕ್ರಮ ಮಾತ್ರ ನೌಕರನ ಮೇಲೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರೇ ಡಿಸಿಎಂ?

ಬೆಳಗಾವಿಯ 3ನೇ ಘಟಕದ ಕಿರಿಯ ಸಹಾಯಕ ಬಿ.ಎಸ್. ಕಿಶೋರ್​ಗೆ ಸಾರಿಗೆ ಹಿರಿಯ ಅಧಿಕಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

Belgavi
ಸಂಸ್ಥೆ ನಿಯಮ ಉಲ್ಲಂಘಿಸಿ ಡೀಸೆಲ್‌ ಹಾಕಿಸಿರುವ ಪ್ರಕರಣ: ನೌಕರ ಶೋಕಾಸ್​ ನೋಟಿಸ್​
author img

By

Published : Jan 9, 2021, 12:25 PM IST

ಬೆಳಗಾವಿ: ಇಲ್ಲಿನ 3ನೇ ಬಸ್ ಡಿಪೋದ ಬಂಕ್​ನಿಂದ ಸ್ವಂತ ಕಾರಿಗೆ ಡೀಸೆಲ್‌ ಹಾಕಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕಾರು ಚಾಲಕನ ಮೇಲೆ ಕ್ರಮ ಜರುಗಿಸದೇ ಡಿಸಿಎಂ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರನ ಮೇಲೆ ಕ್ರಮ ಜರುಗಿಸಿದ್ದಾರೆ.

Showcause notice
ಶೋಕಾಸ್ ನೋಟಿಸ್

ಡಿಸಿಎಂ ಲಕ್ಷ್ಮಣ ಸವದಿ ಅವರ ಈ ಕ್ರಮ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಿದೆ. ಬೆಳಗಾವಿಯ 3ನೇ ಘಟಕದ ಕಿರಿಯ ಸಹಾಯಕ ಬಿ.ಎಸ್. ಕಿಶೋರ್​ಗೆ ಸಾರಿಗೆ ಹಿರಿಯ ಅಧಿಕಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನಿನ್ನೆ ಬಸ್ ಡಿಪೋದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸ್ವಂತ ಕೆಎ 03 ಎನ್.ಎಫ್ 8989 ಕಾರಿಗೆ ನಿಯಮ ಉಲ್ಲಂಘಿಸಿ 44 ಲೀಟರ್ ಇಂಧನ ಹಾಕಲಾಗಿತ್ತು.

ಓದಿ: ಬಸ್​ ಡಿಪೋ ಪೆಟ್ರೋಲ್​ ಬಂಕ್​ನಿಂದ ಡಿಸಿಎಂ ಸವದಿ ಕಾರಿಗೆ ಫುಲ್​ ಟ್ಯಾಂಕ್​ ಡೀಸೆಲ್!​

ಸಂಸ್ಥೆ ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ ಯಾಕೇ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು? ಏಳು ದಿನಗಳ ಒಳಗಾಗಿ ನೋಟಿಸ್​ಗೆ ಉತ್ತರಿಸುವಂತೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರಿಂದ ನೋಟಿಸ್ ಜಾರಿಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.