ಅಥಣಿ: ತಾಲೂಕಿನಲ್ಲಿ ಒಂದು ಕಡೆ ಕೊರೊನಾ ಮಹಾಮಾರಿ ಅಬ್ಬರ, ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ.
ಕೊಳಚೆ ನಿರ್ಮೂಲನಾ ನಿಗಮದ ಅಧ್ಯಕ್ಷ ಮಹೇಶ್ ಕುಮಟಳ್ಳಿ ಸ್ವಕ್ಷೇತ್ರದಲ್ಲಿ ಒಳ ಚರಂಡಿಗಳು ಸರಿಯಾಗಿ ನಿರ್ವಹಣೆಯಾಗದೆ ಗಬ್ಬೆದ್ದು ನಾರುತ್ತಿವೆ. ಗಟಾರದ ನೀರು ಅಥಣಿ ಪಟ್ಟಣದ ಹೃದಯ ಭಾಗದ ಅಂಬೇಡ್ಕರ್ ವೃತ್ತ ಸಮೀಪದ ವಿಜಯಪುರ ರಸ್ತೆ ಮೇಲೆ ಹರಿಯುತ್ತಿದ್ದು, ಅನಿವಾರ್ಯವಾಗಿ ಕೊಳಚೆ ನೀರಿನಲ್ಲಿ ಸಂಚಾರ ಮಾಡಬೇಕಾಗಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ದಿನೇ ದಿನೇ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಧಿಕಾರಿಗಳು ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸಲಹೆ ನೀಡಿದರು.