ಅಥಣಿ: ಮದ್ಯ ಮಾರಾಟಕ್ಕೆ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ, ಮದ್ಯದ ಅಂಗಡಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಮದ್ಯ ಪ್ರಿಯರು ಯಾರೂ ಸಾಮಾಜಿಕ ಅಂತರ ಕಾಯ್ದಕೊಳ್ಳುತ್ತಿಲ್ಲ, ಗುಂಪು ಗುಂಪಾಗಿ ಮಾತನಾಡುತ್ತಾ ನಿಲ್ಲುತ್ತಿದ್ದಾರೆ. ಬ್ಯಾರಿಕೇಡ್ ನಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿ ಮಾಡುತ್ತಿದ್ದಾರೆ.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಮುಂದೆ ನಿಲ್ಲುವುದರಿಂದ ಹಾಗೂ ಅವರು ಎಲೆ ಅಡಿಕೆ, ತಂಬಾಕು, ಪಾನ್ ಪರಾಗ್, ಗುಟ್ಕಾ ಸೇವನೆ ಮಾಡಿ ಉಗುಳುತ್ತಿರುವುದು ಆತಂಕಕ್ಕೀಡು ಮಾಡಿದೆ.
ಮದ್ಯ ಖರೀದಿ ಸಮಯದಲ್ಲಿ ಮಾತ್ರ ಮಾಸ್ಕ್ ಧರಿಸಿಕೊಂಡು ಖರೀದಿಗೆ ಮುಂದಾಗುತ್ತಾರೆ. ಈ ನಡೆ ಒಂದು ಕಡೆ ಮತ್ತೆ ಪರೋಕ್ಷವಾಗಿ ಕೊರೊನಾ ವೈರಸ್ ಹರಡುವುದಕ್ಕೆ ಸರ್ಕಾರ ದಾರಿ ಮಾಡಿಕೊಡುತ್ತಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ.