ಬೆಳಗಾವಿ: ನಿನ್ನೆಯಷ್ಟೇ ಯಮಸಲ್ಲೇಖನ ವ್ರತ ಸ್ವೀಕಾರ ಮಾಡಿರುವ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹರಾಜರನ್ನು ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಡಿಸಿಎಂ ಲಕ್ಷ್ಮಣ್ ಸವದಿ ಬೆಳಗಾವಿಯಿಂದ ಅಥಣಿ ಮಾರ್ಗವಾಗಿ ಜಿಲ್ಲೆಯ ಜುಗಳ ಗ್ರಾಮಕ್ಕೆ ಆಗಮಿಸಿ ಅಥಣಿ ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹರಾಜರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಕಳೆದ ಶನಿವಾರವಷ್ಟೇ ಮುನಿಗಳು ಜೀವನದ ಅಂತಿಮ ಘಟ್ಟವಾದ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದು, ಸವದಿಯವರು ಸ್ವಕ್ಷೇತ್ರ ಅಥಣಿಗೆ ಆಗಮಿಸಿ ಜಂಗಲವಾಲೆ ಬಾಬಾ ಆಶೀರ್ವಾದ ಪಡೆದುಕೊಂಡರು.