ಚಿಕ್ಕೋಡಿ: ಇನ್ನೊಂದು ವಾರದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಬಹುದು. ಯಾರದು ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ನೀಡಿದರು.
ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಮುಂದಿನ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಕೆಟ್ ಬಹುತೇಕ ಘೋಷಣೆ ಮಾಡುತ್ತಾರೆ, ಟಿಕೆಟ್ ಘೋಷಣೆ ಆಗದೇ ಇರುವುದರಿಂದ ಭಿನ್ನಮತ ಇರೋದು ಸಹಜ, ಟಿಕೆಟ್ ಘೋಷಣೆ ಆದ್ಮೇಲೆ ಎಲ್ಲವೂ ತಣ್ಣಗಾಗಲಿದೆ ಎಲ್ಲರೂ ಸೇರಿ ಟಿಕೆಟ್ ಘೋಷಣೆ ಆದವರ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕರೆ ನೀಡಿದರು.
ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಖಚಿತ: ಈಗಾಗಲೇ ಹಲವಾರು ಜನ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ. ಇಲ್ಲಿಯ ಪರಿಸ್ಥಿತಿ ನೋಡಲೇಂದೆ ಸುರ್ಜೇವಾಲಾ ಅವರು ಬಂದಿದ್ದಾರೆ, ಯಾರದು ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಒಗ್ಗಟ್ಟಾಗಿ ಕೆಲಸ ಮಾಡಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿ ಎಂಟು ಸ್ಥಾನಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಶಾಂತಿ, ಹಿಂಸೆಯನ್ನು ಮುಂದುವರಿಸುವುದು ಬಿಜೆಪಿಯ ಧೋರಣೆ: ಸುರ್ಜೇವಾಲಾ
ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಎರಡು ಜನಪರ ಕಾರ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದೇವೆ, ಒಂದು 200 ಯುನಿಟ್ ಉಚಿತ ವಿದ್ಯುತ್, ಮತ್ತು ಪ್ರತಿ ಮನೆಗೆ 2000 ರೂಪಾಯಿ ಕೊಡುವುದು ಗ್ಯಾರಂಟಿ, ಈ ದೃಷ್ಟಿಯಿಂದ ನಮ್ಮ ಕಾರ್ಯಕರ್ತರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಗ್ಯಾರಂಟಿ ಕೊಡುವುದಕ್ಕೆ ಇವತ್ತು ಚಿಕ್ಕೋಡಿ ಬಂದಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಭಿನ್ನಮತ ವಿಚಾರ: ಟಿಕೆಟ್ ಹಂಚಿಕೆ ಆಗುವರಿಗೆ ಭಿನ್ನಮತ ಇದ್ದೆ ಇರುತ್ತದೆ, ಹಂಚಿಕೆ ಆದ ಮೇಲೆ ಎಲ್ಲವೂ ಶಮನ ವಾಗುತ್ತೆ, ಎಲ್ಲರೂ ಕೂಡಿ ಒಬ್ಬರ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಟಿಕೆಟ್ ಸಿಗುವ ಆಸೆಯಲ್ಲಿ ಎಲ್ಲರೂ ಇದ್ದಾರೆ, ಗೊಂದಲ ಇರುವುದು ನಿಜಾ ಆದಷ್ಟು ಬೇಗನೆ ಗೊಂದಲ ನಿವಾರಣೆ ಮಾಡಲಾಗುವುದು ಎಂದರು.
ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ: ಕಾಂಗ್ರೆಸ್ಗೆ ಜನರು ಪರ್ಮನೆಂಟ್ ಹೂವು ಇಡುವರು ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೋಳಿ, ಬಿಜೆಪಿ ಅವರಿಗೆ ಇಡಲಿಕ್ಕೆ ನಾವು ಹೂವು ಇಟಕೋಂಡಿದ್ದೇವೆ. ಇನ್ನೂ ಎರಡು ತಿಂಗಳು ಕಾಯಬೇಕು ಅಷ್ಟೇ, ಯಾರು ಯಾರ ಕಿವಿಗೆ ಇಡುತ್ತಾರೆ ಎಂದು ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್