ಗೋಕಾಕ(ಬೆಳಗಾವಿ) : ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗಮೇಶ್ವರದಲ್ಲಿ ನಡೆದಿದೆ ಎನ್ನಲಾದ ಅವೈಜ್ಞಾನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಹಂಗಿಸುವ
ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ ವಾರ್ ಮುಂದುವರೆದಿದೆ. ರಮೇಶ್ ಜಾರಕಿಹೊಳಿ ಅಧಿಕಾರದ ಬಗ್ಗೆ ಲೇವಡಿ ಮಾಡುವ ವಿಡಿಯೋ ಇದಾಗಿದೆ. ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ಎಂಬ ಹಾಡಿನ ಮೂಲಕ ಅವೈಜ್ಞಾನಿಕವಾಗಿ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾದ ಶೌಚಾಲಯಗಳ ಕಾಮಗಾರಿಯ ಬಗ್ಗೆ ವಿಡಿಯೋ ಮಾಡಲಾಗಿದೆ.