ETV Bharat / state

ಚಿಕ್ಕೋಡಿ: ಚೆಕ್‌ಪೋಸ್ಟ್​ಗಳಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಹಗಲು ದರೋಡೆ ಆರೋಪ!

ಕೊರೊನಾ ಹಾವಳಿಯ ನಡುವೆ, ಈಗಿರುವ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರ ವಾಹನಗಳನ್ನು ತಡೆದು ಆರ್‌ಟಿಓ ಅಧಿಕಾರಿಗಳು ಚೆಕ್​ಪೋಸ್ಟ್​ಗಳಲ್ಲಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

rto
rto
author img

By

Published : Aug 20, 2020, 12:30 PM IST

Updated : Aug 20, 2020, 1:18 PM IST

ಚಿಕ್ಕೋಡಿ (ಬೆಳಗಾವಿ): ಕರ್ನಾಟಕದ ಗಡಿ ಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಹಾಗೂ ಕಾಗವಾಡ ತಾಲೂಕು ಚೆಕ್‌ಪೋಸ್ಟ್​ನಲ್ಲಿ ಆರ್‌ಟಿಓ ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊರೊನಾ ಸಂಕಷ್ಟದಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿದ್ದು, ಹೊತ್ತಿನ ಅನ್ನಕ್ಕೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ರೈತರ ವಾಹನಗಳನ್ನು ತಡೆದು ಅವರಿಂದ ಆರ್​ಟಿಓ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳಿವೆ.

ಗಡಿನಾಡು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೋಗನೊಳ್ಳಿ ಹಾಗೂ ಕಾಗವಾಡ ತಾಲೂಕಿನ ಚೆಕ್​ಪೋಸ್ಟ್ ಹತ್ತಿರ ಆರ್‌ಟಿಓ ಅಧಿಕಾರಿಗಳು ಮೂರು ಚಕ್ರ, ನಾಲ್ಕು ಚಕ್ರ ಸೇರಿದಂತೆ ರೈತರ ತರಕಾರಿ ವಾಹನಗಳನ್ನು ತಡೆದು ನಿಯಮಗಳನ್ನು ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಕೊರೊನಾ ಹಾವಳಿಯ ನಡುವೆ, ಈಗಿರುವ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಆರ್‌ಟಿಓ ಅಧಿಕಾರಿಗಳ ಈ ನಡೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಾರೆ ರೈತ ಮುಖಂಡ ಗಂಗಾಧರ ದೊಡಮನಿ.

ಚೆಕ್‌ಪೋಸ್ಟ್​ಗಳಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಹಗಲು ದರೋಡೆ ಆರೋಪ

ಜಿಲ್ಲೆಯ ಕೋಗನೊಳ್ಳಿ ಚೆಕ್​ಪೋಸ್ಟ್ ಸೇರಿದಂತೆ ವಿವಿಧೆಡೆ ನಮ್ಮ ರೈತರ ವಾಹನಗಳು ಸಂಚರಿಸುತ್ತವೆ. ಪ್ಯಾಸೆಂಜರ್, ಗೂಡ್ಸ್ ವಾಹನಗಳು ಓಡಾಡುತ್ತಿವೆ. ಆದರೆ ಇಲ್ಲಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ವಾಹನಗಳನ್ನು ತಡೆ ಹಿಡಿದು ಹಫ್ತಾ ಎನ್ನುವುದಕ್ಕಿಂತಲೂ ರಾಜಾರೋಷವಾಗಿ ಲಂಚ ತೆಗೆದುಕೊಂಡು ದಂಧೆ ಮಾಡುತ್ತಿದ್ದಾರೆ ಎಂದು ಗಂಗಾಧರ್​ ಕಿಡಿಕಾರಿದ್ದಾರೆ.

ಬೆಳಗಾವಿ ಜಿಲ್ಲೆ ಸೇರಿದಂತೆ ಚಿಕ್ಕೋಡಿ ಭಾಗದಲ್ಲಿ ಹೆಚ್ಚು ಸಚಿವರು ಇದ್ದರೂ ಕೂಡಾ ಈ ದಂಧೆ ನಡೆಯುತ್ತಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡುವವರು ಯಾರು ಇಲ್ಲದಂತಾಗಿದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಆರ್‌ಟಿಓ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ರೈತ ಮುಖಂಡ ಗಂಗಾಧರ ಆಗ್ರಹಿಸಿದ್ದಾರೆ.

Last Updated : Aug 20, 2020, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.